National

ವಿಷಾನಿಲ ಸೋರಿಕೆಯಿಂದಾಗಿ ಓರ್ವ ಸಾವು, ಇನ್ನಿಬ್ಬರಿಗೆ ಚಿಕಿತ್ಸೆ

ಮುಂಬೈ: ಇಂದು ಬೆಳಗ್ಗೆ ವಿಷ ಅನಿಲ ಸೋರಿಕೆಯಿಂದಾಗಿ ಓರ್ವ ಮೃತಪಟ್ಟು , ಇಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮುಂಬೈನ ಘಾಟ್‌ಕೋಪರ್‌ನಲ್ಲಿ ನಡೆದಿದೆ. ರಾಮನಿವಾಸ್‌ ಸರೋಜ್(‌೩೬) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರೂಬಿನ್‌ ಸೋಲ್ಕರ್‌ ಹಾಗೂ ಸರ್ವಾಂಶ್‌ ಸೋನಾವನೆ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇಂದು ಬೆಳಗ್ಗೆ 8.15ಕ್ಕೆ ನಾರಾಯಣನಗರದ ಕುರ್ಲಾ ಇಂಡಸ್ಟ್ರಿಯಲ್‌ ಎಸ್ಟೇಟ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಎಸ್ಟೇಟ್‌ನಲ್ಲಿ ಮೆಥನಾಲ್‌ ಮತ್ತು ಸೈನೂರಿಕ್‌ ಕ್ಲೋರೈಡ್‌ ವಿಷಾನಿಲ ಸೋರಿಕೆಯಾಗಿರುವುದರ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಇಬ್ಬರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

 

Share Post