Districts

ಪತಿಯ ಲಾಡ್ಜ್‌ನಲ್ಲೇ ಸರ್ಕಾರಿ ಅಧಿಕಾರಿ ಆತ್ಮಹತ್ಯೆ

ಹುಬ್ಬಳ್ಳಿ: ಬೆಂಗಳೂರಿನ ನೆಲಮಂಗಲದ ಪರಿಸರ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದ ಶಾಂತಲಾ ಎಂಬ ಮಹಿಳಾ ಅಧಿಕಾರಿ ಹುಬ್ಬಳ್ಳಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ. ಶಾಂತಲಾ ಆತ್ಮಹತ್ಯೆ ಮಾಡಿಕೊಂಡಿರುವ ಲಾಡ್ಜ್‌ ಅವರ ಪತಿಯೇ ನಡೆಸುತ್ತಿದ್ದರು ಎಂದು ಗೊತ್ತಾಗಿದೆ. ಆದರೆ ಆತ್ಮಹತ್ಯೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಪೊಲೀಸರಿಗೆ ಡೆತ್‌ ನೋಟ್‌ ಸಿಕ್ಕಿದೆಯಾದರೂ, ಅದರಲ್ಲಿನ ಅಂಶಗಳನ್ನು ಗೌಪ್ಯವಾಗಿರಿಸಿದ್ದಾರೆ.

   ಶಾಂತಲಾ ಸುಪ್ರೀತಾ ಮೈಸೂರು ಮೂಲದವರು ಎಂದು ಗೊತ್ತಾಗಿದೆ. ಶಾಂತಲಾ ಅವರು ಅತಿಯಾದ ಬೆನ್ನುನೋವಿನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆದ್ರೆ ಆತ್ಮಹತ್ಯೆಗೆ ಇದೇ ಕಾರಣವಾ ಗೊತ್ತಿಲ್ಲ. ಈ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ ಶಾಂತಲಾ ಅವರ ಪುತ್ರಿ ಕೂಡಾ ಕಳೆದ ಅಕ್ಟೋಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿದೆ.

Share Post