CrimeNational

ಗ್ಯಾಂಗ್‌ಸ್ಟರ್‌ ಸಂದೀಪ್ ಗಡೋಲಿ ಕೊಲೆ ಪ್ರಕರಣದ ಆರೋಪಿ ರೂಪದರ್ಶಿ ದಿವ್ಯಾ ಮರ್ಡರ್‌

ನವದೆಹಲಿ; 2016ರ ಫೆಬ್ರವರಿ 7ರಂದು ನಡೆದಿದ್ದ ಗ್ಯಾಂಗ್‌ ಸ್ಟರ್‌ ಸಂದೀಪ್‌ ಗಡಡೋಲಿ ಕೊಲೆ ಪ್ರಕರಣದಲ್ಲಿ ಬೇಲ್‌ ಮೇಲೆ ಹೊರಗಿದ್ದ ರೂಪದರ್ಶಿ ದಿವ್ಯಾ ಪಹುಜಾ ಕೊಲೆಯಾಗಿದ್ದಾರೆ. ಐದು ಜನರ ಗುಂಪು ದಿವ್ಯಾ ಪಹುಜಾರನ್ನು ಮಂಗಳವಾರ ರಾತ್ರಿ ಹೋಟೆಲ್‌ ಒಂದಕ್ಕೆ ಕರೆದೊಯ್ದಿದ್ದಾರೆ. ಹೋಟೆಲ್‌ನ ಕೊಠಡಿಯಲ್ಲಿ ಆಕೆಯ ತಲೆಗೆ ಗುಂಡು ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆ ನಂತರ ಮೃತದೇಹವನ್ನು ಐಶಾರಾಮಿ ಕಾರಿನಲ್ಲಿ ಕೊಂಡೊಯ್ದು ಅದನ್ನು ದೂರದಲ್ಲಿ ಬಿಸಾಡಲು ಪ್ರಯತ್ನಿಸಲಾಗುತ್ತಿತ್ತು. ಈ ವೇಳೆ ಪರಿಶೀಲನೆ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

2016ರ ಫೆಬ್ರವರಿ 7ರಂದು ಗ್ಯಾಂಗ್‌ಸ್ಟರ್‌ ಸಂದೀಪ್‌ ಗಡಡೋಲಿ ಕೊಲೆಯಾಗಿತ್ತು. ಈತನನ್ನು ಮೋಹದ ಬಲೆಗೆ ಬೀಳಿಸಿದ್ದ ರೂಪದರ್ಶಿ ದಿವ್ಯಾ ಪಹುಜಾ, ಸಂದೀಪ್‌ ನಕಲಿ ಎನ್‌ಕೌಂಟರ್‌ಗೆ ಸಹಕಾರ ಕೊಟ್ಟಿದ್ದಳು. ಈ ಹಿನ್ನೆಲೆಯಲ್ಲಿ ದಿವ್ಯಾಳನ್ನು ಬಂಧಿಸಲಾಗಿತ್ತು. ಕಳೆದ ವರ್ಷದ ಜೂನ್‌ನಲ್ಲಿ ಈಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು. ಘಟನೆ ಸಂಬಂಧ ದಿವ್ಯಾ ಜೊತೆಗೆ ಆಕೆಯ ತಾಯಿ ಹಾಗೂ ಐವರು ಪೊಲೀಸರನ್ನು ಬಂಧಿಸಲಾಗಿತ್ತು.

 

Share Post