CrimeDistricts

ತುಮಕೂರಿನಲ್ಲಿ ದಂತ ವೈದ್ಯನಿಂದ ಯುವತಿ ಮೇಲೆ ಅತ್ಯಾಚಾರ..?

ತುಮಕೂರು; ದಂತ ವೈದ್ಯರೊಬ್ಬರು ತಮ್ಮ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.. ಈ ಬಗ್ಗೆ ತುಮಕೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ದಾಖಲು ಮಾಡಿದ್ದಾರೆ..

ಇದನ್ನೂ ಓದಿ; 7ನೇ ವೇತನ ಆಯೋಗ ಶಿಫಾರಸು ಜಾರಿ; ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ತುಮಕೂರಿನ ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ವಿನಾಯ ಡೆಂಟಲ್‌ ಕ್ಲಿನಿಕ್‌ ಮಾಲೀಕ ಡಾ.ಸಂಜಯ್‌ ನಾಯಕ್‌ ವಿರುದ್ಧ ಇಂತಹದ್ದೊಂದು ಗಂಭೀರವಾಗಿ ಆರೋಪ ಮಾಡಲಾಗಿದೆ.. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಟಾಸ್ಕ್ ಪೋರ್ಸ್ ಸದಸ್ಯರೂ ಆಗಿರವ ಡಾ.ಸಂಜಯ್ ನಾಯಕ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ..

ಇದನ್ನೂ ಓದಿ; ಪೊಲೀಸ್‌ ಠಾಣೆ ಎದುರೇ ತಾಯಿಗೆ ಬೆಂಕಿ ಹಚ್ಚಿದ ಪಾಪಿ ಮಗ!

ಕ್ಲಿನಿಕ್‌ನಲ್ಲಿ ನಾನು ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ವೈದ್ಯರು ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದಾರೆ..  ಪೊಲೀಸ್‌ ತನಿಖೆ ನಡೆಯುತ್ತಿದ್ದು, ತನಿಖೆಯಿಂದ ನಿಜ ವಿಷಯ ಬಯಲಿಗೆ ಬರಲಿದೆ..

 

Share Post