National

BMW ಶೋರೂಂನಲ್ಲಿ ಬೆಂಕಿ; 40ಕ್ಕೂ ಹೆಚ್ಚು ಕಾರು ಭಸ್ಮ..!

ಮುಂಬೈ: ಇಲ್ಲಿನ ತುರ್ಭೆ ಎಂಐಡಿಸಿ ಪ್ರದೇಶದಲ್ಲಿ BMW ಶೋರೋಂ ಕಂ ಗೋಡೌನ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸುಮಾರು 40 -45 BMW ಕಾರುಗಳು ಸುಟ್ಟು ಕರಕಲಾಗಿವೆ. ಮಂಗಳವಾರ ಬೆಳಗಿನ ಜಾವ 5.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ ದುಬಾರಿ ಕಾರುಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

Share Post