ಅಪ್ರಾಪ್ತ ಬಾಲಕಿಯ ದಿಟ್ಟ ಸಾಧನೆ: ಅರಳಿದ ಕನಸು
ರಾಜಸ್ಥಾನ: ಮಕ್ಕಳ ಸಹಾಯವಾಣಿಗೆ ಕರೆಮಾಡಿ ತನ್ನ ಮದುವೆಯನ್ನು ತಡೆದ ದಿಟ್ಟ ಬಾಲಕಿಯ ಸಮಯಸ್ಪೂರ್ತಿಗೆ ರಾಜಸ್ಥಾನ ಚಿತ್ತೋರಘಡ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ತನಗೆ ಇಷ್ಟವಿಲ್ಲವಿದಿದ್ರೂ ಮನೆಯಲ್ಲಿ ಬಾಲ್ಯವಿವಾಹ ಮಾಡಲು ಮುಂದಾಗಿದ್ದಾರೆಂದು, ಬಾಲಕಿ ಮಕ್ಕಳ ಸಹಾಯವಾಣಿಗೆ ಕರೆಮಾಡಿ ನನಗೆ ಇಷ್ಟವಿಲ್ಲದ ಮದುವೆ ಮಾಡ್ತಿದ್ದಾರೆ, ನನಗೆ ವಿದ್ಯಾಭ್ಯಾಸ ಮುಂದುವರೆಸಬೇಕೆಂದಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ, ರಾಜಸ್ಥಾನದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸಹಾಯವಾಣಿಗೆ ಬಂದ ಕರೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸಿದೆ. ಅಷ್ಟೆ ಅಲ್ಲದೆ ಬಾಲಕಿಯ ಪೋಷಕರನ್ನುಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕಚೇರಿ ಎದುರು ಹಾಜರುಪಡಿಸಲಾಯ್ತು. ಅಲ್ಲಿ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಪಾಲಿಸುವುದಾಗಿ ಒಪ್ಪಿಕೊಂಡಿದ್ದಾರೆ. ಬಾಲಕಿಯ ಸೋದರತ್ತೆ ಶತಮಾನಗಳಷ್ಟು ಹಳೆಯ ಸಂಪ್ರದಾಯದಂತೆ ತನ್ನ ಮಗನಿಗೆ ಈಕೆಯನ್ನು ಮದುವೆ ಮಾಡಿಕೊಳ್ಳಲು ಈ ರೀತಿ ಮಾಡಿದ್ದಳು ಎನ್ನಲಾಗಿದೆ.