EconomyLifestyleNational

ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್‌ ದರ ಕೇವಲ 99 ರೂಪಾಯಿ!

ಬೆಂಗಳೂರು; ಬೆಂಗಳೂರಿನಿಂದ ಹೈದರಾಬಾದ್‌ಗೆ ಬರೋಬ್ಬರಿ 550 ಕಿಲೋ ಮೀಟರ್‌ ಇದೆ.. ಇಷ್ಟು ದೂರ ಪ್ರಯಾಣ ಮಾಡೋದಕ್ಕೆ ಬಸ್‌ನಲ್ಲಿ ಕನಿಷ್ಠ 1000 ರೂಪಾಯಿಯಾದರೂ ಬೇಕು.. ಅದೂ ಆರ್ಡಿನರಿ ಬಸ್‌ ಆದರೆ ಮಾತ್ರ.. ಆದ್ರೆ ಇಲ್ಲೊಂದು ಲಕ್ಸುರಿ ಬಸ್‌ ನಲ್ಲಿ ಬರೀ 99 ರೂಪಾಯಿಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗಬಹುದು.. ಅಷ್ಟೇ ಏಕೆ ಚೆನ್ನೈ ಸೇರಿ ಸುಮಾರು 31 ನಗರಗಳಿಗೆ ಕೇವಲ 99 ರೂಪಾಯಿಯಲ್ಲಿ ಪ್ರಯಾಣ ಮಾಡಬಹುದು.. ಅಚ್ಚರಿ ಆದರೂ ಇದು ನಿಜ..

ನೀವು ಫ್ಲಿಕ್ಸ್ ಬಸ್ ಸೇವೆಗಳ ಬಗ್ಗೆ ಕೇಳಿರುತ್ತೀರಿ. ದಕ್ಷಿಣ ರಾಜ್ಯಗಳಲ್ಲಿ ತಮ್ಮ ಬ್ರ್ಯಾಂಡ್ ಅನ್ನು ವಿಸ್ತರಿಸುವ ಸಲುವಾಗಿ, ಈ ಬಸ್‌ ಸಂಸ್ಥೆ 99 ರೂಪಾಯಿ ಆಫರ್‌ ನೀಡಿದೆ.. ಫ್ಲಿಕ್ಸ್‌ಬಸ್ ಇತ್ತೀಚೆಗೆ ಬೆಂಗಳೂರಿನಿಂದ ಚೆನ್ನೈ ಮತ್ತು ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್ ಸೇವೆಗಳನ್ನು ಪ್ರಾರಂಭಿಸಿದೆ. ಚೆನ್ನೈ ಮತ್ತು ಹೈದರಾಬಾದ್ ಹೊರತುಪಡಿಸಿ, ಫ್ಲಿಕ್ಸ್‌ಬಸ್ ಬೆಂಗಳೂರಿನಿಂದ  31 ನಗರಗಳಿಗೆ ಬಸ್ ಸೇವೆಗಳನ್ನು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ರೂ. 99 ಸಾವಿರಕ್ಕೆ ಟಿಕೆಟ್ ಬುಕ್ ಮಾಡುವ ಆಫರ್ ಘೋಷಿಸಲಾಗಿದೆ.

ಈ ಟಿಕೆಟ್‌ಗಳನ್ನು ಸೆಪ್ಟೆಂಬರ್ 3-15 ರ ನಡುವೆ ಕಾಯ್ದಿರಿಸಬೇಕು. ಜೊತೆಗೆ ಪ್ರಯಾಣದ ದಿನಾಂಕಗಳು ಸೆಪ್ಟೆಂಬರ್ 11 ರಿಂದ ಅಕ್ಟೋಬರ್ 6 ರ ನಡುವೆ ಇರಬೇಕು. ಹೀಗೆ ಬುಕ್‌ ಮಾಡಿದರೆ ನೀವು 99 ರೂಪಾಯಿಗೇ ಪ್ರಯಾಣ ಮಾಡಬಹುದು..

 

Share Post