ಕೌಟುಂಬಿಕ ಕಲಹ; ಪತ್ನಿ, ಸೋದರಳಿಯನಿಗೆ ಗುಂಡು ಹಾರಿಸಿ ಎಸಿಪಿ ಆತ್ಮಹತ್ಯೆ.!
ಮುಂಬೈ; ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎಸಿಪಿ ಒಬ್ಬರು ಪತ್ನಿ ಹಾಗೂ ಸೋದರಳಿಯನ ಮೇಲೆ ಗುಂಡು ಹಾರಿಸಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ದುರ್ಘಟನೆ ನಡೆದಿದೆ. ಪೊಲೀಸ್ ಇಲಾಖೆಯಲ್ಲಿ ಎಸಿಪಿಯಾಗಿ ಕೆಲಸ ಮಾಡುತ್ತಿದ್ದ ಭರತ್ ಗಾಯಕ್ವಾಡ್ ಎಂಬುವವರೇ ಈ ಕೃತ್ಯ ಎಸಗಿರುವವರು.
ಭರತ್ ಗಾಯಕ್ವಾಡ್ ಪತ್ನಿ ಮೋನಿ ಗಾಯಕ್ವಾಡ್, ಸೋದರಳಿಯ ದೀಪಕ್ ಅವರು ಬಂದೂಕಿನ ಗುಂಡಿಗೆ ಬಲಿಯಾಗಿದ್ದಾರೆ. ನಂತರ ಭರತ್ ಗಾಯಕ್ವಾಡ್ ಕೂಡಾ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗಿನಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ರಾತ್ರಿಯಲ್ಲಿ ಪತಿ, ಪತ್ನಿ ಜೊತೆ ಜಗಳವಾಗಿದ್ದು, ಈ ವೇಳೆ ಭರತ್ ಗಾಯಕ್ವಾಡ್ ಅವರು ಪತ್ನಿ ಮೋನಿಗೆ ಗುಂಡು ಹಾರಿಸಿದ್ದಾರೆ. ಈ ವೇಳೆ ಪಕ್ಕದ ರೂಮಿನಲ್ಲಿ ಮಲಗಿದ್ದ ಮಗ ಹಾಗೂ ಸೋದಳಿಯನಿಗೆ ಸದ್ದು ಕೇಳಿಸಿದೆ. ಕೂಡಲೇ ಅವರು ಎದ್ದುಬಂದಿದ್ದಾರೆ. ಈ ವೇಳೆ ಭರತ್ ಗಾಯಕ್ವಾಡ್ ಅವರು ಸೋದಳಿಯನ ಮೇಲೂ ಗುಂಡು ಹಾರಿಸಿದ್ದಾರೆ. ಅನಂತರ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.