CrimeDistricts

ಸಿಂಧನೂರು ಬಳಿ ಭೀಕರ ಅಪಘಾತ; ನಾಲ್ವರ ದಾರುಣ ಸಾವು

ರಾಯಚೂರು; ರಾಯಚೂರು ಜಿಲ್ಲೆ ಸಿಂಧನೂರಿನ ಬಳೀ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಿಂಧನೂರು ಬಳಿಯ ಪಗಡದಿನ್ನಿ ಕ್ಯಾಂಪ್ ಬಳಿ ಈ ದುರಂತ ನಡೆದಿದೆ.

ಲಾರಿ ಹಾಗೂ ಟಾಟಾ ಏಸ್​​ ನಡುವೆ ಡಿಕ್ಕಿಯಾಗಿ ಈ ಭೀಕರ ಘಟನೆ ನಡೆದಿದೆ. ಟಾಟಾ ಏಸ್‌ನಲ್ಲಿ ಮದುವೆ ಸಮಾರಂಭವೊಂದಕ್ಕೆ ಶಾಮಿಯಾನಗಳನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇಸ್ಮಾಯಿಲ್(25), ಚನ್ನಬಸವ(26), ಅಂಬರೀಶ್(20), ರವಿ(21) ನಾಲ್ವರು ಟಾಟಾ ಏಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಮೀರ್‌ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.  ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post