BengaluruCrime

ಅಡಿಕೆ ವ್ಯಾಪಾರಿಯ 1 ಕೋಟಿ ನಗದು ಕಳವು; ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ..!

ಬೆಂಗಳೂರು; ಅಕ್ಟೋಬರ್‌ 7 ರಂದು ಅಂತಾರಾಜ್ಯ ಅಡಿಕೆ ವ್ಯಾಪಾರಿ ಬಳಿಯಿಂದ 1 ಕೋಟಿ ರೂಪಾಯಿ ನಗದು ಕಳವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ನಗದು ಹಾಗೂ ಚಿನ್ನಾಭರಣಗಳನ್ನು ಕೂಡಾ ವಶಪಡಿಸಿಕೊಂಡಿದ್ದಾರೆ.

ಹೆಚ್‌.ಎಸ್‌.ಉಮೇಶ್‌ ಎಂಬುವವರು ಅಂತಾರಾಜ್ಯ ಅಡಿಕೆ ವ್ಯಾಪಾರಿಯಾಗಿದ್ದರು. ಅವರು ಅಕ್ಟೋಬರ್‌ ಏಳರಂದು ಕಾರಿನಲ್ಲಿ ಒಂದು ಕೋಟಿ ರೂಪಾಯಿ ಹಣದೊಂದಿಗೆ ವಿವಿಧ ಜಿಲ್ಲೆಗಳಲಿಗೆ ಭೇಟಿ ನೀಡಿದ್ದರು. ಅಡಿಕೆ ಖರೀದಿ ಮಾಡಲೆಂದು ಆ ಹಣ ತಂದಿದ್ದರು. ಹಣವನ್ನು ಅವರು ಕಾರಿನ ಡಿಕ್ಕಿಯಲ್ಲಿ ಇಟ್ಟಿದ್ದರು. ಅವರು ಡಾಬಸ್‌ ಪೇಟೆ, ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ನಿಲ್ಲಿಸಿದ್ದರು. ಅನಂತರ ಗಾಂಧಿನಗರದಲ್ಲಿ ಹೋಟೆಲ್‌ ಒಂದರ ಬಳಿ ಕಾರು ನಿಲ್ಲಿಸಿ ಊಟಕ್ಕೆ ಹೋಗಿದ್ದರು.

ಅನಂತರ ಅಂದು ಸಂಜೆ ಅಡಿಕೆ ವ್ಯಾಪಾರಿ ಉಮೇಶ್‌ ಅವರು,  ಚಿತ್ರದುರ್ಗದ ಭೀಮಸಮುದ್ರದ ಅಂಗಡಿಯೊಂದಕ್ಕೆ ಹೋಗಿದ್ದಾರೆ. ಈ ವೇಳೆ ಕಾರಿನ ಡಿಕ್ಕಿ ತೆಗೆದು ನೋಡಿದಾಗ ಹಣವಿದ್ದ ಬ್ಯಾಗ್‌ ನಾಪತ್ತೆಯಾಗಿತ್ತು. ಕೂಡಲೇ ಅವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರು ಅಂದು, ಶಿರಾ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧೀ‌ನಗರಕ್ಕೆ ಬಂದಿದ್ದರು.

ಗಾಂಧಿನಗರದ ಹೋಟೆಲ್‌ ಬಳಿ ನಿಲ್ಲಿಸಿದ್ದಾಗ ಹಣ ಕಳವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಪ್ರಕರಣ ದಾಳಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಉಮೇಶ್‌ ಅವರ ಕಾರು ಚಾಲಿ ಸಂತೋಷ್‌ ಸೇರಿ ಮೂವರನ್ನು ಬಂಧಿಸಿದ್ದಾರೆ.

 

Share Post