ಮಧ್ಯ ಪ್ರದೇಶ : ವಿದೇಶದಿಂದ ಬಂದ ೮ ಜನರಲ್ಲಿ ಓಮಿಕ್ರಾನ್ ಪತ್ತೆ
ಭೋಪಾಲ್ :ಮಧ್ಯಪ್ರದೇಶದ ಇಂದೋರ್‌ನಲ್ಲಿ ೮ ಜನರಿಗೆ ಓಮಿಕ್ರಾನ್ ದೃಢವಾಗಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಸೋಂಕಿತರಲ್ಲಿ ಮೂವರು ಅಮೇರಿಕ, ಇಂಗ್ಲೆಂಡ್ ಮತ್ತು ತಾಂಜೇನಿಯಾದ ಇಬ್ಬರು ಹಾಗೂ ಘಾನಾದಿಂದ ಒಬ್ಬರು ಇಂದೋರ್‌ಗೆ ಬಂದಿದ್ದರು.
ಇದೇ ಮೊದಲ ಬಾರಿಗೆ ಮಧ್ಯ ಪ್ರದೇಶದ ಸರ್ಕಾರ ಅಧಿಕೃತವಾಗಿ ರಾಜ್ಯದ ಓಮಿಕ್ರಾನ್ ಪ್ರಕರಣಗಳನ್ನು ದೃಢಪಡಿಸಿದೆ. ಇಂದೋರ್‌ನಲ್ಲಿ ೮ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಈ ಜನ ಪೈಕಿ ೬ ಜನರು ಗುಣಮುಖರಾಗಿದ್ದು, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಏರುತ್ತಿರುವ ಓಮಿಕ್ರಾನ್ ಪ್ರಕರಣಗಳನ್ನು ಪರಿಗಣಿಸಿ ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೈಟ್ ಕರ್ಫ್ಯೂ ವಿಧಿಸಿದ್ದಾರೆ. ಹೀಗೆ ಪ್ರಕರಣಗಳು ಹೆಚ್ಚಾದರೆ ಕಠಿಣ ಕ್ರಮಗಳನ್ನು ವಿಸ್ತರಿಸಲಾಗುವುದೆಂದು ತಿಳಿಸಿದ್ದಾರೆ.