Bengaluru

ರೂಲ್ಸ್‌ ವಾಪಸ್‌ ಪಡೆಯುವ ಮಾತೇ ಇಲ್ಲ-ಸಿಎಂ

ಬೆಂಗಳೂರು: ನಾಳೆಯಿಂದ ಹತ್ತು ದಿನಗಳ ಕಾಲ ವಿಧಿಸಿರುವ ನೈಟ್‌ ಕರ್ಪ್ಯೂ ಮತ್ತು 50-50 ನೀತಿಯಿಂದ ವ್ಯಾಪಾರಸ್ಥರು,  ಉದ್ಯಮಿಗಳು ರೋಸಿ ಹೋಗಿದ್ದಾರೆ. ಕೊರೊನಾ ಹಾವಳಿಗೆ ಈಗಾಗಲೇ ನೆಲಕಚ್ಚಿರುವ ಆರ್ಥಿಕತೆ ಈಗಷ್ಟೇ ಚೇತರಿಸಿಕೊಳ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಕರ್ಪ್ಯೂ ಅಂತ ಹೋದ್ರೆ ನಮ್ಮ ಬದುಕು ಹೇಗೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ ವ್ಯಾಪಾರಸ್ಥರು.

ಇದಕ್ಕೆ ಪ್ರತಿಯಾಗಿ ವ್ಯಾಪಾರ-ವಹಿವಾಟು ಸ್ಥಗಿತ ಮಾಡುವ ಉದ್ದೇಶ ನಮಗೂ ಇಲ್ಲ, ಆದ್ರೆ ಜನರ ಆರೋಗ್ಯ, ಕಾಳಜಿ ನಮ್ಮ ಜವಾಬ್ದಾರಿ. ಹಾಗಾಗಿ ಈ ನಿರ್ಧಾರವನ್ನು ಎಲ್ಲರು ಪಾಲಿಸಲೇಬೇಕು ಎಂದು ಸಿಎಂ ಬೊಮ್ಮಾಯಿಯವರು ಹೇಳಿದ್ದಾರೆ.

ಸರ್ಕಾರ ಈ ನಿರ್ಧಾರದಿಂದ ಜನ ಕಂಗಾಲಾಗಿದ್ದಾರೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿಯೇ ವ್ಯಾಪಾರ ಹೆಚ್ಚಾಗುವುದು ಈ ಸಂದರ್ಭದಲ್ಲಿ ನೀವು ನೈಟ್‌ ಕರ್ಫ್ಯೂ ಮಾಡಿದ್ರೆ ನಾವು ಹೇಗೆ ಬ್ಯುಸಿನೆಸ್‌ ಮಾಡೋದು? ಎಂದು ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಸ್ಥರು, ಓಲಾ, ಊಬರ್‌, ಚಿತ್ರರಂಗ, ಬಾರ್‌, ಪಬ್‌, ರೆಸ್ಟೋರೆಂಟ್‌, ಡಿಜೆ, ಪ್ರವಾಸೋದ್ಯಮ ಎಲ್ಲಾ ಉದ್ಯಮಗಳು ಪ್ರಶ್ನಿಸಿದ್ದಾರೆ. ಯಾವುದೇ ಕಾರಣಕ್ಕೂ ರೂಲ್ಸ್‌ ವಾಪಸ್‌ ಪಡೆಯುವ ಮಾತೇ ಇಲ್ಲ ಎಂದು ಬೊಮ್ಮಾಯಿಯವರು ಖಡಕ್‌ ಉತ್ತರ ನೀಡಿದ್ರು.

Share Post