National

ರಾಹುಲ್‌ ಆಯ್ತು, ಈಗ ಸೋನಿಯಾ ಸರದಿ; ನಾಳೆ ವಿಚಾರಣೆಗೆ ಹಾಜರಾಗ್ತಾರಾ ಸೋನಿಯಾಗಾಂಧಿ..?

ನವದೆಹಲಿ; ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಹಗರಣ ಸಂಬಂಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಇಡಿ ಅಧಿಕಾರಿಗಳು ಐದು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮೊದಲು ಸತತ ಮೂರು ದಿನ ವಿಚಾರಣೆ ನಡೆಸಲಾಗಿತ್ತು. ಅನಂತರ ನಾಲ್ಕು ದಿನ ವಿರಾಮ ಕೊಟ್ಟು ನಂತರ ಸೋಮವಾರ ಮತ್ತು ಮಂಗಳವಾರ ವಿಚಾರಣೆ ನಡೆಸಲಾಗಿದೆ. ಆದ್ರೆ ಇಂದು ರಾಹುಲ್‌ಗೆ ಸಮನ್ಸ್‌ ನೀಡಿಲ್ಲ. ಹೀಗಾಗಿ ರಾಹುಲ್‌ ವಿಚಾರಣೆ ಮುಗಿದಿದೆ ಎಂದು ಹೇಳಲಾಗುತ್ತಿದೆ. ಇನ್ನು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸೋನಿಯಾಗಾಂಧಿಯವರಿಗೆ ಜೂನ್‌ 23ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್‌ ಜಾರಿ ಮಾಡಿದೆ. ಹೀಗಾಗಿ ನಾಳೆ ಸೋನಿಯಾ ವಿಚಾರಣೆಗೆ ಬರುತ್ತಾರಾ ಅಥವಾ ವಿನಾಯಿತಿ ಕೋರುತ್ತಾರಾ ಎಂಬುದರ ಬಗ್ಗೆ ಕುತೂಹಲ ಶುರುವಾಗಿದೆ.\

 

ಕೊವಿಡ್‌ನಿಂದ ಬಳಲುತ್ತಿದ್ದ ಸೋನಿಯಾಗಾಂಧಿ ಹಲವು ದಿನಗಳಿಂದ ದೆಹಲಿ ಗಂಗಾರಾಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಎರಡು ದಿನದ ಹಿಂದೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಆದ್ರೆ ವೈದ್ಯರು ರೆಸ್ಟ್‌ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸೋನಿಯಾಗಾಂಧಿ, ಇಡಿ ಬಳಿ ವಿನಾಯಿತಿ ಕೋರುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಅಂದಹಾಗೆ, ರಾಹುಲ್‌ರನ್ನು ಸತತವಾಗಿ ವಿಚಾರಣೆ ನಡೆಸುತ್ತಿದ್ದರಿಂದ ಅವರನ್ನು ಬಂಧಿಸುವ ಸಾಧ್ಯತೆ ಇತ್ತು ಎನ್ನಲಾಗಿತ್ತು. ಆದ್ರೆ ಐದುಗಳ ವಿಚಾರಣೆ ನಂತರ ರಾಹುಲ್‌ ನಿರಾಳರಾಗಿದ್ದಾರೆ. ಇದುವರೆಗೆ ಅವರು ಒಟ್ಟು 54 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದು, ಇಡಿ ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Share Post