National

2023ರ ವೇಳೆಗೆ ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್‌ಪೋರ್ಟ್‌ ಜಾರಿ

ದೆಹಲಿ: ದೇಶದ ಎಲ್ಲಾ ರಾಜ್ಯಗಳಲ್ಲಿ ಶೀಘ್ರದಲ್ಲೇ ಇ-ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ದೇಶದಾದ್ಯಂತ ಜಿಲ್ಲಾವಾರು ಹಿಂದುಳಿದ ಪ್ರದೇಶಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಆರಂಭಿಸಲಾಗುವುದೆಂದು ತಿಳಿಸಿದ್ದಾರೆ.

2022-23ರವೇಳೆಗೆ ವಿಶೇಷ ಚಿಪ್‌ ಒಳಗೊಂಡ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗುವುದ. ಪಾಸ್‌ಪೋರ್ಟ್ ವಿತರಣೆಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು. ನಗರ ಮತ್ತು ಪಟ್ಟಣಗಳ ಅಭಿವೃದ್ಧಿಗೆ ಹೊಸ ಪಟ್ಟಣ ಯೋಜನೆ ಜಾರಿಗೊಳಿಸಲಾಗುವುದು ಎಂದರು. ನಗರಗಳಲ್ಲಿ ಪ್ರಯಾಣ ಸೌಲಭ್ಯಗಳ ಅಭಿವೃದ್ಧಿ ಜತೆಗೆ ಪಟ್ಟಣ, ನಗರಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಸುಧಾರಣೆ ತರಲಾಗುವುದು ಎಂದರು. ಪಟ್ಟಣ ಯೋಜನೆ ಅಭಿವೃದ್ಧಿಗೆ ವಿಶೇಷ ಕೋರ್ಸ್‌ಗಳು ಮತ್ತು ಪಠ್ಯಕ್ರಮಗಳನ್ನು ತರಲು ಯೋಜಿಸಲಾಗಿದೆ ಎಂದು ಸಚಿವೆ ನಿರ್ಮಲಾ ಹೇಳಿದರು.‌

ಸರಕು ಸಾಗಾಣಿಕೆ ನಡೆಸಲು ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡಲಾಗುವುದು ಎಂದರು. ನಗರ ಪ್ರದೇಶಗಳಲ್ಲಿ ವಾಹನಗಳ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ  ಮಾಡಲಾಗುವುದು.  ಬ್ಯಾಟರಿ ಸ್ವಾಪಿಂಗ್‌ ಸೌಕರ್ಯಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Share Post