Economy

ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು..?

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. 2022-23 ಸಾಲಿನ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಏನೆಲ್ಲಾ ನೀಡಲಾಗಿದೆ.. ಇಲ್ಲಿದೆ ವಿವರ..

 

  1. ರೈತರಿಗೆ ಒನ್‌ ಸ್ಟೇಷನ್‌, ಒನ್‌ ಪ್ರಾಡಕ್ಟ್‌ ಯೋಜನೆ
  2. 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ
  3. ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಹೆಚ್ಚು ಪ್ರೋತ್ಸಾಹ
  4. ನದಿಗಳ ಜೋಡಣೆಗೆ ಬಜೆಟ್‌ನಲ್ಲಿ ಗ್ರೀನ್‌ ಸಿಗ್ನಲ್‌
  5. ಕಾವೇರಿ, ಪೆನ್ನಾರ್‌ ಹಾಗೂ ಕೃಷ್ಣಾ -ಪೆನ್ನಾರ್‌  ನದಿ ಜೋಡಣೆಗೆ ಸಮ್ಮತಿ
  6. ಗೋದಾವರಿ-ಕೃಷ್ಣಾ ನದಿ ಜೋಡಣೆಗೂ ಅನುಮತಿ
  7. ಭೂ ದಾಖಲೆಗಳ ಡಿಜಟಲೀಕರಣಕ್ಕೆ ಹೆಚ್ಚು ಒತ್ತು
  8. ಆಸ್ತಿ ನೋಂದಣಿಗೆ ಒಂದು ದೇಶ, ಒಂದು ನೋಂದಣಿ ವ್ಯವಸ್ಥೆ ಜಾರಿ
  9. ಎಸ್‌ಸಿ.ಎಸ್‌ಟಿ ರೈತರಿಗೆ ಆರ್ಥಿಕ ನೆರವು ನೀಡಲು ಯೋಜನೆ
  10. ಅರಣ್ಯ ಕೃಷಿ ಮಾಡುವವರಿಗೆ ಹೆಚ್ಚಿನ ಆದ್ಯತೆ, ಅಂತಹವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ
  11. ಕೃಷಿ ಉಪಕರಣ ಹಾಗೂ ವಿದೇಶಿ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ
  12. ಒಂದು ಮಾರುಕಟ್ಟೆ ಒಂದು ತೆರಿಗೆ ಯೋಜನೆ ಜಾರಿ
  13. ಕನಿಷ್ಟ ಬೆಂಬಲ ಬೆಲೆ ಘೋಷಣೆಗೆ 2.87 ಲಕ್ಷ ಕೋಟಿ ರೂಪಾಯಿ ಮೀಸಲು
Share Post