ಪ್ರವಾಸಿಗರ ಜೊತೆ ಟೆಂಪರರಿ ಮದುವೆ!; ಇಂಡೋನ್ಯೇಷ್ಯಾದಲ್ಲಿ ಇದೆಂಥಾ ಟ್ರೆಂಡ್?
ಇಂಡೋನೇಷ್ಯಾ; ಟೆಕ್ನಾಲಜಿ, ಸಮಾಜ ಬೆಳೆದಂತೆಲ್ಲಾ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತಿದೆ.. ಈ ಹಿಂದೆ ಮದುವೆ ಅನ್ನೋದು ನೂರು ವರ್ಷಗಳ ಬಂಧನ ಎಂದು ಹೇಳಲಾಗುತ್ತಿತ್ತು.. ಆದ್ರೆ ಈಗ ಮದುವೆಯೇ ಆಗದೇ ಸಂಸಾರ ನಡೆಸುವವರು ಹೆಚ್ಚಾಗುತ್ತಿದ್ದಾರೆ.. ಇನ್ನೂ ಮುಂದುವರೆದು ಇಂಡೋನೇಷ್ಯಾದ ಕೆಲ ಭಾಗಗಳಲ್ಲಿ ತಾತ್ಕಾಲಿಕ ಮದುವೆಗಳ ಟ್ರೆಂಡ್ ಹುಟ್ಟಿಕೊಂಡಿದೆ.. ಪ್ರವಾಸಕ್ಕೆಂದು ಬರುವವರನ್ನು ಆಕರ್ಷಿಸಿ ಅವರೊಂದಿಗೆ ತಾತ್ಕಾಲಿಕ ಮದುವೆಯಾಗುವ ಟ್ರೆಂಡ್ ಹುಟ್ಟಿಕೊಂಡಿದೆ.. ಇದು ಪೂರ್ತಿ ಕಮರ್ಷಿಯಲ್ ಆಗಿದ್ದು, ಬಡ ಯುವತಿಯರು ಪ್ರವಾಸಿಗರನ್ನು ಹಣಕ್ಕಾಗಿ ವಾರದ ಮಟ್ಟಿಗೆ ಮದುವೆಯಾಗುತ್ತಾರಂತೆ..!
ಇಂಡೋನೇಷ್ಯಾದ ಪುಂಕಾಕ್ ಎಂಬ ಹಳ್ಳಿಯಲ್ಲಿ ಇಂತಹದ್ದೊಂದು ಪದ್ಧತಿ ಇದೆ.. ಈ ಹಳ್ಳಿ ಬಡ ಹೆಣ್ಣು ಮಕ್ಕಳು ಪ್ರವಾಸಿಗರನ್ನು ಮದುವೆಯಾಗುತ್ತಾರೆ.. ಪ್ರವಾಸಿಗರ ಬಳಿ ವಾರದ ಮಟ್ಟಿಗೆ ಮದುವೆಯಾಗಲು ಇಂತಿಷ್ಟು ಅಂತ ಹಣ ಪಡೆಯುತ್ತಾರೆ.. ಮದುವೆಯಾಗಿ ಪ್ರವಾಸಿಗರೊಂದಿಗೆ ಒಂದು ವಾರದ ಕಾಲ ಹಾಸಿಗೆ ಹಂಚಿಕೊಳ್ಳುತ್ತಾರೆ.. ಅನಂತರ ಮತ್ತೊಬ್ಬ ಪ್ರವಾಸಿಗರನ್ನು ಹುಡುಕಿಕೊಳ್ಳುತ್ತಾರೆ.. ಬಡತನದ ಕಾರಣಕ್ಕಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.. ವಿದೇಶಿ ಮಾಧ್ಯಮಗಳ ಈ ಬಗ್ಗೆ ಸುದ್ದಿ ಮಾಡಿವೆ..