Bengaluru

ರಾಜ್ಯ ಸರ್ಕಾರ ಅಭಿವೃದ್ದಿ ಪರವಾಗಿದೆ, ಆತಂಕಪಡಬೇಕಿಲ್ಲ: ಕಿರಣ್‌ ಮುಜುಂದಾರ್‌ ಟ್ವೀಟ್‌ಗೆ ಅಶೋಕ್‌ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಕೋಮು ಸಂಘರ್ಷ ಐಟಿಬಿಟಿ ಕೇತ್ರಕ್ಕೂ ಕಾಲಿಟ್ಟರೆ ಅಪಾಯ. ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶ ಮಾಡಲಿದೆ ಎಂಬ ಅಫಬಿಪ್ರಾಯವನ್ನು ವ್ಯಕ್ತಪಡಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್‌ ರಾಜ್ಯ ಸರ್ಕಾರ ಅಭಿವೃದ್ಧಿ ಪರವಾಗಿದೆ. ಯಾವುದೇ ವಿಚಾರಕ್ಕೆ ಆತಂಕಪಡುವ ಅವಶ್ಯಕತೆಯಿಲ್ಲ. ಹಿಜಾಬ್‌ ವಿಚಾರದಲ್ಲಿ ಕೋರ್ಟ್‌ ಆದೇಶ ಪಾಲಿಸುತ್ತಿದ್ದೇವೆ. ಹಲಾಲ್‌ ವಿಚಾರದ ಬಗೆಗೆ ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಆಹಾರ ಪದ್ದತಿ ಅವರವರ ಸ್ವ ಇಚ್ಛೆ ಆಗಿದೆ ಅಂತ. ಹೀಗಾಗಿ ಅಭಿವೃದ್ದ ಕುಂಠಿತವಾಗಲು ನಾವು ಬಿಡುವುದಿಲ್ಲ. ಯಾರೂ ಈ ಬಗ್ಗೆ ಭಯಪಡುವ ಅಗತ್ಯ ಇಲ್ಲ ಎಂಬುದಾಗಿ ಸಚಿವ ಅಶೋಕ್‌ ತಿಳಿಸಿದ್ದಾರೆ.

ಕಿರಣ್‌ ಮುಜುಂದಾರ್‌ ಕಳವಳ ಏನು..? 

ಕರ್ನಾಟಕದಲ್ಲಿ ಕೋಮುವಾದ ಹೆಚ್ಚಾಗುತ್ತಿದೆ. ಐಟಿಬಿಟಿ ಕ್ಷೇತ್ರಕ್ಕೂ ಕಾಲಿಟ್ಟರೆ ಅಪಾಯ. ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ ಎಂದು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಆತಂಕ ವ್ಯಕ್ತಪಡಿಸಿದ್ರು. ಈ ಬಗ್ಗೆ ಟ್ವೀಟ್‌ ಮಾಡಿ ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ದೇಶ ನಮ್ಮದು. ರಾಜ್ಯದಲ್ಲೂ ಕೂಡಾ ಎಲ್ಲರನ್ನೂ ಒಳಗೊಂಡ ಆರ್ಥಿಕ ಅಭಿವೃದ್ಧಿಯನ್ನು ರೂಪಿಸಲಾಗಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು ಎಂದು ಕಿರಣ್‌ ಮಜುಂದಾರ್‌ ಶಾ ಹೇಳಿದ್ದಾರೆ.

ಈ ಬಗ್ಗೆ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದು, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ ಎಂದು ಕಿರಣ್‌ ಮಜುಂದಾರ್‌ ಶಾ ಒತ್ತಾಯಿಸಿದ್ದಾರೆ.

Share Post