ಒಮಿಕ್ರಾನ್ ಭೀತಿ : 30000 ಬೆಡ್ ಸಿದ್ಧ ಮಾಡಲಿದೆ ದೆಹಲಿ ಸರ್ಕಾರ
ನವದೆಹಲಿ : ಒಮಿಕ್ರಾನ್ ಭೀತಿ ಎಲ್ಲೆಡೆ ಶುರುವಾಗಿದೆ. ಇದನ್ನು ಎದುರಿಸಲು ದೆಹಲಿ ಸರ್ಕಾರ ಸಜ್ಜಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವೆಂಟಿಲೇಟರ್ ಸೌಲಭ್ಯವಿರುವ 30,000 ಬೆಡ್‌ಗಳು ಹಾಗೂ ಆಮ್ಲಜನಕ ಪೂರೈಕೆ ಹಾಗೂ ಸಂಗ್ರಹ ವ್ಯವಸ್ಥೆಯನ್ನು ಒಂದೆರಡು ವಾರಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುವುದು. ಕೊರೊನಾ ರೂಪಾಂತರಿ ವೈರಸ್ ಆಗಿರುವ ಓಮಿಕ್ರಾನ್ ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.