ರಷ್ಯಾದಿಂದ ಬಂದ ವಿಮಾನದಲ್ಲಿ ಬಾಂಬ್ ಬೆದರಿಕೆ; ದೆಹಲಿಯಲ್ಲಿ ಅಲರ್ಟ್
ನವದೆಹಲಿ; ಮಾಸ್ಕೋದಿಂದ ದೆಹಲಿಗೆ ಬಂದ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಕಳೆದ ರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಬೆದರಿಕೆ ಈ ಮೇಲ್ ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಭದ್ರತಾ ಸಿಬ್ಬಂದಿ ತೀವ್ರ ಪರಿಶೀಲನೆ ನಡೆಸಿದ್ದಾರೆ.
ರಷ್ಯಾದ ಮಾಸ್ಕೋದಿಂದ ವಿಮಾನ ಇಂದು ಬೆಳಗಿನ ಜಾವ 3:20ಕ್ಕೆ ದೆಹಲಿ ತಲುಪಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ಕ್ಕೆ ಬರುತ್ತಿದ್ದ ಈ ವಿಮಾನದಲ್ಲಿ ಬಾಂಬ್ ಇರುವುದಾಗಿ ಈ ಮುಂದೆಯೇ ಮೇಲ್ ಬಂದಿತ್ತು.
ಹೀಗಾಗಿ ಕೂಡಲೇ ಮುನ್ನೆಚ್ಚರಿಕೆ ವಹಿಸಲಾಯಿತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವಿಮಾನದಲ್ಲಿದ್ದ 386 ಪ್ರಯಾಣಿಕರು ಹಾಗೂ 16 ಸಿಬ್ಬಂದಿಯನ್ನ ಕೆಳಗಿಳಿಸಲಾಯಿತು.