ಸಿನಿಮಾ ಪೈರಸಿ ಮಾಡಿದರೆ ಕೋಟಿ ಕೋಟಿ ದಂಡ, ಜೈಲೂಟವೂ ಫಿಕ್ಸ್..!
ನವದೆಹಲಿ; ಸಿನಿಮಾ ಪೈರಸಿ ಹೆಚ್ಚಾಗುತ್ತಿರುವುದರಿಂದ ಚಿತ್ರ ನಿರ್ಮಾಪಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಪೈರಸಿ ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಪೈರಸಿ ಮಾಡಿ ಸಿಕ್ಕಿಬಿದ್ದರೆ ಕೋಟ್ಯಂತರ ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಇದರ ಮಸೂದೆಯನ್ನು ಲೋಕಸಭೆಯಲ್ಲಿ ಪಾಸ್ ಮಾಡಲಾಗಿದೆ.
ಲೋಕಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಸಿನಿಮಾಟೋಗ್ರಫಿ ಬಿಲ್ 2023 ಅನ್ನು ಮಂಡನೆ ಮಾಡಿದರು. ಇದರ ಪ್ರಕಾರ ಯಾರಾದರೂ ಪೈರಸಿ ಮಾಡಿದರೆ ಅವರಿಗೆ ಸಿನಿಮಾಗೆ ಆಗಿರುವ ಖರ್ಚಿನಲ್ಲಿ ಶೇಕಡಾ 5ರಷ್ಟು ದಂಡ ವಿಧಿಸಲಾಗುತ್ತದೆ. ಜೊತೆಗೆ ಮೂರು ವರ್ಷ ಜೈಲು ಶಿಕ್ಷೆ ಕೂಡಾ ಆಗಲಿದೆ.