CrimeDistricts

ಫಾಜಿಲ್‌ ಹತ್ಯೆ ಪ್ರಕರಣ; ಚುರುಕುಗೊಂಡ ಪೊಲೀಸರ ತನಿಖೆ

ಸುರತ್ಕಲ್; ಮಹಮ್ಮದ್ ಫಾಜಿಲ್‌ ಹತ್ಯೆ ತನಿಖೆ ನಡೆಯುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಸಂಬಂಧಿಸಿದ ವಿಚಾರದ ಬಗ್ಗೆ ಹಾಕುತ್ತಿರುವ ಪೋಸ್ಟ್ಗಳನ್ನು ಗಮನಿಸಲಾಗುತ್ತಿದೆ. ಸೈಬರ್ ಕ್ರೈ ಪೊಲೀಸರ ಸಹಕಾರ ಪಡೆದು, ಇಂತಹವರ‌ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಶಶಿಕುಮಾರ್‌ ಹೇಳಿದ್ದಾರೆ. ಇನ್ನು ಆರೋಪಿಗಳಲ್ಲಿ ಇಬ್ಬನ ಮುಖ ಚಹರೆ ಪತ್ತೆಯಾಗಿದೆ, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post