BengaluruEconomy

ಇಂದಿನಿಂದ ಹಾಲಿನ ದರ ಜಾಸ್ತಿ; ಆದರೂ ರಾಜ್ಯದಲ್ಲಿ ಹಾಲಿಗೆ ಕಡಿಮೆ ಬೆಲೆ..!

ಬೆಂಗಳೂರು; ಇಂದಿನಿಂದ ನಂದಿನಿ ಹಾಲಿನ ದರ ಲೀಟರ್‌ಗೆ ಮೂರು ರೂಪಾಯಿ ಜಾಸ್ತಿಯಾಗಿದೆ. ಟೋನ್ಡ್‌ ಹಾಲಿನ ದರ 39 ರೂಪಾಯಿ ಇದ್ದದ್ದು 42 ರೂಪಾಯಿ ಆಗಿದೆ. ಅದೇ ರೀತಿ ಎಲ್ಲಾ ಗುಣಮಟ್ಟದ ಹಾಲಿನ ದರವೂ ಲೀಟರ್‌ಗೆ ಮೂರು ರೂಪಾಯಿ ಜಾಸ್ತಿಯಾಗಿದೆ. ಇದರಿಂದಾಗಿ ಗ್ರಾಹಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಹಾಗೆ ನೋಡಿದರೆ ರಾಜ್ಯದಲ್ಲಿ ದರ ಏರಿಕೆ ಮಾಡಿದ್ದರೂ ಕೂಡಾ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹಾಲಿನ ದರ ತುಂಬಾನೆ ಕಡಿಮೆ ಇದೆ. ಪಕ್ಕದ ರಾಜ್ಯಗಳಲ್ಲಿ ಹಾಲಿನ ದರಕ್ಕೆ ಹೋಲಿಸಿದರೆ ನಂದಿನ ಹಾಲು ಕಡಿಮೆ ದರಕ್ಕೆ ಸಿಗುತ್ತಿದೆ ಎಂದೇ ಹೇಳಬಹುದು.

 ರಾಜ್ಯವಾರು ಹಾಲಿನ ದರ ಲೀಟರ್‌ಗೆ

==========================

ಕರ್ನಾಟಕ – 42 ರೂಪಾಯಿ

ಆಂಧ್ರ ಪ್ರದೇಶ – 56 ರೂಪಾಯಿ

ಕೇರಳ – 51 ರೂಪಾಯಿ

ಮಹಾರಾಷ್ಟ್ರ – 54 ರೂಪಾಯಿ

ತಮಿಳುನಾಡು – 44 ರೂಪಾಯಿ

 

ರಾಜ್ಯದಲ್ಲಿ ಯಾವ ಹಾಲಿನ ಬೆಲೆ ಎಷ್ಟಿದೆ..?

============================

ಟೋನ್ಡ್‌ ಹಾಲು (ನೀಲಿ ಪ್ಯಾಕೆಟ್‌) – 42 ರೂ.

ಹೋಮೋಜಿನೈಸ್ಡ್‌ ಹಾಲು – 43  ರೂ.

ಶುಭಂ – 48 ರೂ.

ಮೊಸರು – 50 ರೂ.

 

Share Post