Districts

ಡಿ.ಕೆ.ಶಿವಕುಮಾರ್ ಅವರ ಅಜ್ಜಿ‌ ನಿಂಗಮ್ಮ ಇನ್ನಿಲ್ಲ

ಬೆಂಗಳೂರು : ಡಿ.ಕೆ.ಶಿವಕುಮಾರ್‌ ಅವರ ಅಜ್ಜಿ ನಿಂಗಮ್ಮ ಕನಕಪುರದ ದಯಾನಂದಸಾಗರ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ನಿಂಗಮ್ಮ 106 ವರ್ಷಗಳ ಕಾಲ ಬದುಕಿದ್ದರು.

ನಿಂಗಮ್ಮ ಅವರ ಅಂತ್ಯಕ್ರಿಯೆ ಇಂದು ಸಾಯಂಕಾಲ ೪.೩೦ಕ್ಕೆ ನಡೆಯಲಿದೆ. ಬೆಳಗಾವಿ ಕಲಾಪದಲ್ಲಿ ಇದ್ದ ಡಿ.ಕೆ.ಶಿವಕುಮಾರ್‌ ಶುಕ್ರವಾರ ಗೈರಾಗಿದ್ದಾರೆ. ೧೨ ಗಂಟೆಯ ವಿಮಾನದ ಮೂಲಕ  ಬೆಂಗಳೂರಿಗೆ ಆಗಮಿಸಿ ನಂತರ ಅವರು ತಮ್ಮ ಊರಿಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳಲಿದ್ದಾರೆ.

Share Post