ಕೇಂದ್ರ ಸಚಿವರ ಮನೆ ಎದುರೇ ಕೊಲೆ..!
ಆನೇಕಲ್: ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರ ಆನೇಕಲ್ನ ಮನೆ ಮುಂದೆಯೇ ದುಷ್ಕರ್ಮಿಗಳು ನೆತ್ತರು ಹರಿಸಿದ್ದಾರೆ. ಗುಂಡಿ ಹಾರಿಸಿ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಆನೇಕಲ್ -ಚಂದಾಪುರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಆನೇಕಲ್ ಕೋರ್ಟಿಗೆ ಬಂದಿದ್ದ ವ್ಯಕ್ತಿಯ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಕೊಲೆಯಾಗಿರುವ ವ್ಯಕ್ತಿ ಬಿಟಿಎಂ ಲೇಔಟ್ನವರು ಎಂದು ಗೊತ್ತಾಗಿದೆ.
ಮೊದಲಿಗೆ ಕಾರು ಅಡ್ಡಗಟ್ಟಿ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದಾರೆ. ಅನಂತರ ಲಾಂಗ್, ಮುಚ್ಚಿಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಆನೆಕಲ್ ಜನ ಬೆಚ್ಚಿಬಿದ್ದಿದ್ದಾರೆ.