Cinema

ಹೊಸ ವರ್ಷ ಆಚರಣೆ – ಬೀಚ್‌ಗೆ ತೆರಳಿದ ದಿಶಾ ಪಟಾನಿ ಮತ್ತು ಟೈಗರ್‌ ಶ್ರಾಫ್

ಬೆಂಗಳೂರು : ಬಾಲಿವುಡ್‌ ನಟಿ ದಿಶಾ ಪಟಾನಿ ಹೊಸ ವರ್ಷವನ್ನು ಆಚರಿಸುವ ಸಲುವಾಗಿ ಬೀಚ್‌ ಪ್ರದೇಶಕ್ಕೆ ತೆರಳಿದ್ದಾರೆ. ದಿಶಾ ಜೊತೆ ಟೈಗರ್‌ ಶ್ರಾಫ್‌ ಕೂಡ ಇದ್ದಾರೆ ಎಂದು ಹೇಳಲಾಗ್ತಿದೆ.

ದಿಶಾ ಪಟಾನಿ ಮತ್ತು ಟೈಗರ್‌ ಶ್ರಾಫ್‌ ತಮ್ಮ ಪ್ರತ್ಯೇಕ ಇನ್ಸ್ಟಾ ಖಾತೆಯಲ್ಲಿ ಬೀಚ್‌ ಮುಂದೆ ಪೋಸ್‌ ಕೊಟ್ಟಿರುವ ಫೋಟೋ ಹಂಚಿಕೊಂಡಿದ್ದಾರೆ. ದಿಶಾ ಪಟಾನಿ ಅವರಿಗೆ ಬೀಚ್‌ ಮತ್ತು ಬಿಕಿನಿ ಎಂದರೆ ತುಂಬಾ ಇಷ್ಟ. ಅಭಿಮಾನಿಗಳು ಕೂಡ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ದಿಶಾ ಪಟಾನಿ ಮತ್ತು ಟೈಗರ್‌ ಶ್ರಾಫ್‌ ಬಗ್ಗೆ ಊಹಾಪೋಹಗಳು ಓಡಾಡ್ತಿವೆಯಾದರೂ ಯಾವುದೂ ಅಧಿಕೃತ ಆಗಿಲ್ಲ. ಹೊಸ ವರ್ಷದ ಜಾಲಿ ಮೂಡ್‌ನಲ್ಲಿರುವ ದಿಶಾ ಸಾಕಷ್ಟು ಸಿನಿಮಾಗಳಲ್ಲಿ ಬಿಜಿ ಇದ್ದಾರೆ. ಈ ಜೋಡಿ ಒಂದಾಗಲಿ ಎಂದು ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

Share Post