ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ರೂ. ಕಾಣಿಕೆ ಕೊಟ್ಟ ಶ್ರೀಮಂತ ಭಕ್ತ..!
ತಿರುಪತಿ: ದುಬೈನಲ್ಲಿ ನೆಲೆಸಿರುವ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ ಭಾರಿ ಪ್ರಮಾಣ ಕಾಣಿಕೆಯನ್ನು ಅರ್ಪಿಸಿದ್ದಾರೆ. ದುಬೈನಲ್ಲಿ ಲೆಕ್ಕ ಪರಿಶೋಧಕರಾಗಿರುವ ಎಂ ಹನುಮಂತಕುಮಾರ್ ಅವರು ಟಿಟಿಡಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಡಿಡಿಯನ್ನು ಹಸ್ತಾಂತರಿಸಿದ್ದಾರೆ.
ಹನುಮಂತಕುಮಾರ್ ಅವರು ಇಂದು ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ಅನಂತರ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅವರನ್ನು ಭೇಟಿ ಮಾಡಿದ ಹನುಮಂತಕುಮಾರ್, ದೇಣಿಕೆಯ ಡಿಡಿಯನ್ನು ಹಸ್ತಾಂತರ ಮಾಡಿದರು. ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಅದನ್ನು ಬಡವರು, ನಿರ್ಗತಿಕ ಕಲ್ಯಾಣಕ್ಕಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ