National

ಸೋಮನಾಥದಲ್ಲಿ ಮೋದಿಯವರಿಂದ ಸರ್ಕ್ಯೂಟ್‌ ಹೌಸ್‌ ಉದ್ಘಾಟನೆ

ಗುಜರಾತ್:‌ ಪುರಾತನ ಇತಿಹಾಸ ವೈಭವವನ್ನು ಹೊಂದಿರುವ ಗುಜರಾತ್‌ನ ಸೋಮನಾಥ ದೇವಾಯಲದ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಸರ್ಕ್ಯೂಟ್‌ ಹೌಸ್‌ ಅನ್ನು ಉದ್ಘಾಟನೆ ಮಾಡಿದ್ದಾರೆ. ಇಂದು ಬೆಳಗ್ಗೆ 11ಗಂಟೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟನೆ ಮಾಡಿದ್ದಾರೆ. ಬರೋಬ್ಬರಿ ಮೂವತ್ತು ಸಾವಿರ ಕೋಟಿ ವೆಚ್ಚದಲ್ಲಿ ಈ ಸರ್ಕ್ಯೂಟ್‌ ಹೌಸ್‌ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿಯವರು,
ಸುಮಾರು ₹30 ಕೋಟಿ ವೆಚ್ಚದಲ್ಲಿ ನೂತನ ಸರ್ಕ್ಯೂಟ್ ಹೌಸ್ ನಿರ್ಮಾಣವಾಗಿದ್ದು, ವಿಐಪಿ ಮತ್ತು ಡಿಲಕ್ಸ್ ಕೊಠಡಿಗಳು ಮತ್ತು ಸೂಟ್‌ಗಳು, ಕಾನ್ಫರೆನ್ಸ್ ಕೊಠಡಿ ಮತ್ತು ಆಡಿಟೋರಿಯಂ ಹಾಲ್ ಸೇರಿದಂತೆ ಉನ್ನತ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಪ್ರತಿ ಕೊಠಡಿಯಿಂದಲೂ ಸಮುದ್ರದ ನೋಟ ಲಭ್ಯವಾಗುವ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಬಲಪಡಿಸುವ ಪ್ರಯತ್ನದಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ಸೋಮನಾಥದಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟನೆ ಮಾಡಲಾಗಿತ್ತು. ಪಾರ್ವತಿ ದೇವಾಲಯಕ್ಕೆ ಶಂಕುಸ್ಥಾಪನೆ ಮಾಡುವ ವೇಳೆ ಈ ಸರ್ಕ್ಯೂಟ್‌ ಹೌಸ್‌ ನಿರ್ಮಿಸಲು ಒಟ್ಟು ₹ 30 ಕೋಟಿಯನ್ನು ಮೀಸಲಿಡಲಾಗಿತ್ತು. ಸೋಮನಾಥ ವಾಯುವಿಹಾರ, ಸೋಮನಾಥ ವಸ್ತುಪ್ರದರ್ಶನ, ಕೇಂದ್ರ ಮತ್ತು ಹಳೆಯ (ಜುನಾ) ಸೋಮನಾಥನ ಪುನರ್‌ ನಿರ್ಮಿಸಿದ ದೇವಾಲಯದ ಆವರಣ ಮತ್ತು ಇತರ ಯೋಜನೆಗಳನ್ನು ಉದ್ಘಾಟಿಸಲಾಯಿತು.

 

Share Post