ಸಣ್ಣ ವಿಷಯಕ್ಕೆ ಕುಡುಕ ಪ್ರಿಯಕರ ಪ್ರೇಯಸಿಗೆ ಮಾಡಿದ್ದೇನು ಗೊತ್ತಾ?
ಮಧ್ಯಪ್ರದೇಶ: ಸಾಮಾನ್ಯವಾಗಿ ಕುಡುಕರಿಗೆ ಮನೆಯವರು ಸುಮ್ಮನೆ ಕ್ಯಾತೆ ತೆಗದರೆ, ಅವರು ಏನು ಮಾಡೋಕೆ ಹೇಸಲ್ಲ. ಒಂದು ವೇಳೆ ಅವರಿಗೆ ದುಡ್ಡು ಮತ್ತು ಕುಡಿಯೋದು ಬೇಡ ಅಂತಾ ಹೇಳಿದರೆ ಸಾಕು ಎಷ್ಟೇಲ್ಲ ರಂಪ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಕುಡುಕ ಸಣ್ಣ ವಿಷಯಕ್ಕೆ ಪ್ರೇಯಸಿಗೆ ಏನು ಮಾಡಿದ್ದಾನೆ ಗೊತ್ತಾ… ಇಲ್ಲಿ ನೋಡಿ. ಹೌದು ಮಧ್ಯಪ್ರದೇಶದಲ್ಲಿ ಪ್ರೇಯಸಿ ಕುಡಿಯುವುದಕ್ಕೆ ಹಣಕೊಟ್ಟಿಲ್ಲ ಎಂಬ ಕಾರಣಕ್ಕೆ ಆಕೆಯ ಮುಗನ್ನೇ ಕತ್ತರಿಸಿ ಹಾಕಿದ್ದಾನೆ. ಪ್ರಿಯಕರ ಲವಕುಶ್ ಪಟೇಲ್ ಹಾಗೂ ಪ್ರೇಯಸಿ ಸೋನು ಇವರಿಬ್ಬರು ಲೀವ್ ಇನ್ ರಿಲೆಷನ್ ಶಿಪ್ ನಲ್ಲಿದ್ದಾರೆ. ಹೀಗಾಗಿ ಮದ್ಯ ತೆಗೆದುಕೊಳ್ಳಲು ಪ್ರೇಯಸಿ ಸೋನು ಬಳಿ ಹಣ ಕೇಳಿದ್ದ. ಆಕೆ ಇವನಿಗೆ ಹಣ ನೀಡಲು ನಿರಾಕರಿಸಿದ್ದಳು. ಇದ್ದರಿಂದ ಕೋಪಗೊಂಡ ಪ್ರಿಯಕರ ಲವಕುಶ್ ಪಟೇಲ್ ಸೋನು ಮುಗನ್ನು ಕಟ್ ಮಾಡಿದ್ದಾನೆ. ಸದ್ಯ ಸೋನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.