ಕೇಳೋರಿಲ್ಲ ಬಿಬಿಎಂಪಿ ಕ್ಯಾಂಟೀನ್ ಮಾರ್ಷಲ್ಗಳ ಗೋಳು
ಬೆಂಗಳೂರು: ಕೋವಿಡ್ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬಿಬಿಎಂಪಿ, ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ ಮಾರ್ಷಲ್ಗಳನ್ನು ನೇಮಕ ಮಾಡಿಕೊಂಡಿದ್ರು. ಆದ್ರೀಗ ಅವರ ಕತೆ ವ್ಯಥೆ ಕೇಳುವವರೇ ಇಲ್ಲ, ಸರಿಯಾದ ಸಮಯಕ್ಕೆ ಸಂಬಳ ಸಿಗದೆ, ಜನರಿಂದ ಛೀಮಾರಿ ಹಾಕಿಸಿಕೊಂಡು ಥೂ..ನಮ್ಮ ಬದುಕು ಎಂಬಂತಾಗಿದೆ. ಕೇವಲ ಕ್ಯಾಂಟೀನ್ ನಿರ್ವಹಣೆಗೆ ಅಂದ್ರೆ ಊಟದ ಗುಣಮಟ್ಟ, ಸಿಬ್ಬಂದಿ ನಡವಳಿಕೆ, ಸರಿಯಾದ ಸಮಯಕ್ಕೆ ಆಹಾರ ವಿತರಣೆ, ಕ್ಯಾಂಟೀನ್ ಸ್ವಚ್ಛತೆ, ಸೆಕ್ಯುರಿಟಿ ಸೇರಿದಂತೆ ಇತರೆ ವಿಚಾರಗಳಿಗೆ ನೇಮಕ ಮಾಡಿಕೊಂಡ್ರು. ಆದ್ರೆ ಇದರ ಜೊತೆ ಜೊತೆಗೆ ಮಾಸ್ಕ್ ಜಾಗೃತಿಯೂ ಸೇರಿಸಿದ್ದಾರೆ. ಬೆಳಗ್ಗೆ ಎದ್ದು ಕ್ಯಾಂಟೀನ್ ಕೆಲಸ ಮಾಡುವುದರ ಜೊತೆಗೆ ಮೆಜೆಸ್ಟಿಕ್ ಸೇರಿದಂತೆ ಇತರೆ ಕಡೆಗಳಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕುವ ಕೆಲಸವನ್ನೂ ಒಪ್ಪಿಸಿದ್ದಾರೆ. ಎಲ್ಲವನ್ನೂ ಮಾಡಿದ್ರು ಬಿಬಿಎಂಪಿ ಇದುವರೆಗೆ ಸಂಬಳ ನೀಡಿಲ್ಲ ಸುಮಾರು 3ತಿಂಗಳಿಂದ ಸ್ಯಾಲರಿಯಿಲ್ಲದೆ ಮಾರ್ಷಲ್ಗಳು ಗೋಳಾಡುತ್ತಿದ್ದಾರೆ. ಇದರ ಜೊತೆಗೆ ಮಾಸ್ಕ್ ದಂಡ ವಿಧಿಸಲು ಹೋದ್ರೆ ಜನ ಬಾಯಿಗೆ ಬಂದಂತೆ ಶಾಪ ಹಾಕ್ತಾರೆ ನಮ್ಮ ಗೋಳು ಯಾರಿಗೆ ಹೇಳೋಣ ಅಂತಿದಾರೆ ಮಾರ್ಷಲ್ಗಳು.