ಹಣದ ಸಮಸ್ಯೆ; ಹೆಂಡತಿ, ಮಕ್ಕಳ ಕತ್ತು ಸೀಳಿ ಯಜಮಾನ ಆತ್ಮಹತ್ಯೆ
ಚೆನ್ನೈ; ಕುಟುಂಬ ನಿರ್ವಹಣೆಗೆ ಹಣ ಇಲ್ಲದ ಕಾರಣ ಮನನೊಂದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಪೋರ್ಟಬಲ್ ಎಲೆಕ್ಟ್ರಿಕ್‌ವುಡ್ ಕಟ್ಟರ್ನಿಂದ ಕತ್ತು ಕತ್ತರಿಸಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೆನ್ನೈನ ಪೊಜಿಚಲೂರ್‌ನಲ್ಲಿ ಈ ಕೃತ್ಯ ನಡೆದಿದೆ.
ಚೆನ್ನೈನ ಪೊಜಿಚಲೂರ್‌ನ ನಿವಾಸಿಗಳಾಗಿದ್ದ ಪ್ರಕಾಶ್ (41), ಅವರ ಪತ್ನಿ ಗಾಯತ್ರಿ ಮತ್ತು 13 ಮತ್ತು 9 ವರ್ಷದ ಇಬ್ಬರು ಮಕ್ಕಳು ಮೃತಪಟ್ಟವರು. ಈ ಭೀಕರ ಘಟನೆ ನೆರೆಹೊರೆಯಲ್ಲಿ ಆಘಾತವನ್ನುಂಟು ಮಾಡಿದೆ. ಕುಟುಂಬಸ್ಥರು ಮನೆಯಿಂದ ಹೊರಬಾರದೇ ಇದ್ದಾಗ ಅನುಮಾನಗೊಂಡ ನೆರೆಹೊರೆಯವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಾಲ್ವರೂ ರಕ್ತದ ಮಡುವಿನಲ್ಲಿ ಕತ್ತು ಸೀಳಿಕೊಂಡು ಬಿದ್ದಿರುವುದು ಕಂಡು ಬಂದಿದೆ.