ಬಿಎಸ್‌ಎನ್‌ಎಲ್ ನಿಂದ ಬಿಗ್ ಆಫರ್
ನವದೆಹಲಿ: ಇತ್ತೀಚೆಗೆ ಎರ್‌ಟೈಲ್ ಹಾಗೂ ಜಿಯೋ ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿನಿಂದ ಬಿಎಸ್ ಎನ್ ಎಲ್ ಬಳಕೆ ಮಾಡುವರ ಸಂಖ್ಯೆ ತೀರ ಕಡಿಮೆಯಾಗಿದೆ. ಹೀಗಾಗಿ ಬಿಎಸ್ ಎನ್ ಎಲ್ ಕಡೆಯಿಂದ ಆಫರ್ ಬರುತ್ತಿದೆ. ಬಿಎಸ್‌ಎನ್‌ಎಲ್‌ನ 2399 ರೂ.ಯ ವಾರ್ಷಿಕ ಪ್ಲಾನ್ 365 ದಿನಗಳ ವರೆಗೆ ಸಾಮಾನ್ಯವಾಗಿ ಮಾನ್ಯತೆ ಹೊಂದಿರುತ್ತದೆ. ಆದರೆ ಇದೀಗ ಬಿಎಸ್‌ಎನ್‌ಎಲ್ ಡಿಸೆಂಬರ್ 31ರ ಒಳಗಾಗಿ ಈ ಪ್ರಿಪೇಯ್ಡ್ ಯೋಜನೆಯನ್ನು ಹಾಕಿಸಿದರೆ 60 ದಿನಗಳವರೆಗೆ ಉಚಿತ ವ್ಯಾಲಿಡಿಟಿಯನ್ನು ಪಡೆಯಬಹುದು.ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ದೀರ್ಘಾವಧಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ 425 ದಿನಗಳ ವರೆಗೆ ಮಾನ್ಯತೆ ಹೊಂದಿದ ಆಫರ್ ನೀಡಿದೆ. ಆದರೆ ಈ ಕೊಡುಗೆ ಗ್ರಾಹಕರಿಗೆ ಡಿಸೆಂಬರ್ 31ರ ವರೆಗೆ ಮಾತ್ರವೇ ಲಭ್ಯವಿರುತ್ತದೆ.