NationalTechnology

ಭಾರತಕ್ಕೆ ಮತ್ತಷ್ಟು ರಫೆಲ್‌ ಜೆಟ್‌ ಆಫರ್:‌ ಫ್ರಾನ್ಸ್‌ ರಕ್ಷಣಾ ಮಂತ್ರಿ

ದೆಹಲಿ: ಭಾರತಕ್ಕೆ ಅಗತ್ಯವಿದ್ರೆ ಮತ್ತಷ್ಟು ರಫೆಲ್‌ ಜೆಟ್‌ಗಳನ್ನು ನೀಡುವುದಾಗಿ ಫ್ರಾನ್ಸ್‌ ರಕ್ಷಣಾ ಮಂತ್ರಿ ಫ್ಲಾರೆನ್ಸ್‌ ಪಾರ್ಲೆ ತಿಳಿಸಿದ್ರು. ಭಾರತದ ಪ್ರವಾಸದಲ್ಲಿರುವ ಫ್ಲಾರೆನ್ಸ್‌ ಭಾರತದ ಪ್ರತಿಷ್ಠಿತ ಸಂಸ್ಥೆ ಪಬ್ಲಿಕ್‌ ಪಾಲಿಸಿ ಅನಂತ ಆಸ್ಪೇಂಚರ್‌ ಆಯೋಜಿಸಿದ್ದ ಸೆಷನ್‌ನಲ್ಲಿ ಈ ಮಾತನ್ನು ಹೇಳಿದ್ದಾರೆ. ರಫೆಲ್‌ ಯುದ್ದ ವಿಮಾನಗಳು ಎರಡೂ ದೇಶಗಳ ಆಸ್ತಿ ಮತ್ತು ಶಕ್ತಿದಾಯಕವಾಗಿರುತ್ತವೆ. ರಫೆಲ್‌ ಬಗ್ಗೆ ಭಾರತ ಸೇನೆ ಸಂತೃಪ್ತಿಯಾಗುವುದು ನಮಗೆ ಸಂತೋಷ ಕೂಡ ತಂದಿದೆ. ಹಾಗೆ ಭಾರತದ ವಾಯುಸೇನೆಗೆ ಏನೇ ಅವಶ್ಯಕತೆಗಳಿದ್ದಲ್ಲಿ ಅದನ್ನು ಪೂರೈಸಲು ನಾವು ಸಿದ್ಧ ಎಂದು ಫ್ಲಾರೆನ್ಸ್‌ ಹೇಳಿದ್ರು.

Share Post