National

DSP ಕಚೇರಿ ಬಳಿಯೇ ಮಾರಾಮಾರಿ; ಒಬ್ಬನ ಹತ್ಯೆ, ಮತ್ತೊಬ್ಬನ ಸ್ಥಿತಿ ಗಂಭೀರ

ಶ್ರೀಕಾಕುಳಂ (ಆಂಧ್ರ ಪ್ರದೇಶ): ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಹಾಡಹಗಲೇ ಭೀಕರ ಹತ್ಯೆ ನಡೆದಿದೆ. ಇಲ್ಲಿ ಗೌನಪಾಲೆಂ ಬಳಿ ಗುಂಪೊಂದು ಇಬ್ಬರು ವ್ಯಕ್ತಿಗಳ ಮೇಲೆ ಚಾಕುಗಳಿಂದ ದಾಳಿ ಮಾಡಿದೆ. ಡಿಎಸ್‌ಪಿ ಕಚೇರಿ ಬಳಿಯೇ ಈ ದಾಳಿ ನಡೆದಿರುವ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
    ತರುಣ್‌ ರಾಜ್‌ ಹಾಗೂ ಆತನ ಸಹಚರನೊಬ್ಬ ಗೌನಪಾಲೆಂನ ಡಿಎಸ್‌ಪಿ ಕಚೇರಿ ಬಳಿ ಬರುತ್ತಿದ್ದಾಗ ಗುಂಪೊಂದು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಘಟನೆಯಲ್ಲಿ ತರುಣ್‌ ರಾಜ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಕೂಡಾ ಗಂಭೀರವಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ದಾಳಿ ಮಾಡಿದ ಗುಂಪು ಪರಾರಿಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಗೌನಪಾಲೆಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Share Post