ಹಲಾಲ್ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡಿದ್ರೆ ಕ್ರಮ-ಗೃಹ ಸಚಿವ
ಬೆಂಗಳೂರು: ರಾಜ್ಯದಲ್ಲಿ ಕೋಮು ಸಂಘರ್ಷ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಹಿಜಾಬ್ ವಿಚಾರವಾಗಿ ಹೊತ್ತಿದ ಬೆಂಕಿ ಇದೀಗ ಧರ್ಮ ವ್ಯಾಪಾರ ಸೇರಿದಂತೆ ಹಲಾಲ್‌ವರೆಗೂ ಮುಟ್ಟಿದೆ. ಹಲಾಲ್ ನಿಷೇಧಿಸುವಂತೆ ಈಗಾಗಲೇ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಚೋದನೆ ನೀಡುವಂತಿಲ್ಲ. ಒಂದು ವೇಳೆ ಪ್ರಚೋದನೆ ನೀಡಿದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಲಾಲ್ ನಮ್ಮ ದೇವರಿಗೆ ಆಗುವುದಿಲ್ಲ ಎಂಬ ಚರ್ಚೆ ನಡೆದಿದೆ. ಹಲಾಲ್ ಮಾಂಸ ಖರೀದಿ ಮಾಡಲ್ಲ ಎಂಬ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಚರ್ಚೆ ನಡೆಯುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಇದು ವಿಕೋಪಕ್ಕೆ ಹೋಗಬಾರದು ಅಷ್ಟೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.