ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿ; ಫ್ಲೈ ಓವರ್ನಿಂದ ಜಿಗಿದು ಪತ್ನಿ ಆತ್ಮಹತ್ಯೆ!
ಚೆನ್ನೈ; ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ಜಗಳಗಳು, ವಿಚ್ಛೇದನಗಳು ಕಾಮನ್ ಆಗಿಬಿಟ್ಟಿವೆ.. ಸಣ್ಣಪುಟ್ಟದಲ್ಲೂ ದಂಪತಿಗಳ ನಡುವೆ ಜಗಳು ನಡೆಯುತ್ತಿವೆ.. ಇದೇ ಕಾರಣದಿಂದ ಪತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ.. ಇದರಿಂದ ಮನನೊಂದ ಪತ್ನಿ ಫ್ಲೈಓವರ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಇಂತಹದ್ದೊಂದು ದಾರುಣ ಘಟನೆ ಚೆನ್ನೈನ ವೆಲಚೇರಿಯಲ್ಲಿ ನಡೆದಿದೆ..
40 ವರ್ಷದ ಶೋಭಾ ಎಂಬಾಕೆಯೇ ಸಾವನ್ನಪ್ಪಿದ ಮಹಿಳೆಯಾಗಿದ್ದಾಳೆ.. ಶೋಭಾ ಹಾಗೂ ಕಾರ್ತೀಕ್ ಎಂಬುವವರು ನಾಲ್ಕ ವರ್ಷದ ಹಿಂದೆ ವಿವಾಹವಾಗಿದ್ದರು.. ಈ ದಂಪತಿ ತಾಂಬರಂ ಸಮೀಪದ ಸೆಂಬಕ್ಕಂನಲ್ಲಿ ವಾಸವಿದ್ದು, ಇವರಿಗೆ ಮೂರು ವರ್ಷದ ಗಂಡು ಮಗುವಿದೆ.. ಕೆಲ ತಿಂಗಳಿಂದ ಗಂಡ-ಹೆಂಡತಿ ನಡುವೆ ಜಗಳಗಳಾಗುತ್ತಿತ್ತು.. ಇನ್ನು ಇಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದುದರಿಂದ ಗಂಡ ಕಾರ್ತೀಕ್, ಶೋಭಾಗೆ ಡಿವೋರ್ಸ್ ನೀಡಲು ಮುಂದಾಗಿದ್ದ.
ಇದರಿಂದಾಗಿ ಶೋಭಾ ಗಂಡನ ಜೊತೆ ಕಾಂಪ್ರೊಮೈಸ್ ಮಾಡಿಕೊಳ್ಳಲು ಯತ್ನಿಸಿದ್ದಳು.. ಆದ್ರೆ ಇದಕ್ಕೆ ಗಂಡ ಕಾರ್ತೀಕ್ ಒಪ್ಪಿಲ್ಲ.. ಹೀಗಾಗಿ, ಆಕೆ ಬೇಸರದಿಂದ ಹೊರಹೋಗಿದ್ದಳು.. ಸ್ಕೂಟರ್ ನಲ್ಲಿ ವೆಲಚೇರಿ ಫ್ಲೈಓವರ್ ಬಳಿ ಬಂದ ಶೋಭಾ, ಅಲ್ಲಿಯೇ ಸ್ಕೂಟರ್ ನಿಲ್ಲಿಸಿ, ತಡೆಗೋಡೆ ಏರಿ ಕೆಳಗೆ ಹಾರಿದ್ದಾಳೆ..
ತೀವ್ರವಾಗಿ ಗಾಯಗೊಂಡಿದ್ದ ಶೋಭಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಶೋಭಾ ಇಂಜಿನಿಯರ್ ಆಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ..