LifestyleNationalTechTechnology

ಸ್ಪರ್ಶದಲ್ಲೇ ಎಲೆಕ್ಟ್ರಾನಿಕ್‌ ವಸ್ತುಗಳ ಸಮಸ್ಯೆ ಹೇಳುವ ಮಿರಾಕಲ್‌ ಮ್ಯಾನ್‌

ಕೊಯಮತ್ತೂರು; ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಬ್ಬ ಮಿರಾಕಲ್‌ ಮ್ಯಾನ್‌ ಇದ್ದಾನೆ. ಆತ, ಸ್ಪರ್ಶದ ಮೂಲಕವೇ ನಿಮ್ಮ ಮಿಕ್ಸಿಗೆ ಏನಾಗಿದೆ, ನಿಮ್ಮ ರೆಪ್ರಿಜರೇಟರ್‌ ಯಾಕೆ ಕೆಲಸ ಮಾಡುತ್ತಿಲ್ಲ, ನಿಮ್ಮ ವಾಷಿಂಗ್‌ ಮಷಿನ್‌ನಲ್ಲಿ ಏನು ಹೋಗಿದೆ ಅನ್ನೋದನ್ನು ತಿಳಿಸಿಬಿಡುತ್ತಾನೆ. ಯಾಕಂದ್ರೆ ಆತನಿಗೆ ಚಿಕ್ಕವಯಸ್ಸಿನಿಂದಲೂ ಕಣ್ಣು ಕಾಣಿಸುವುದಿಲ್ಲ. ಹೀಗಾಗಿ ಆತ ಸ್ಪರ್ಶದ ಮೂಲಕವೇ ಸಮಸ್ಯೆ ಕಂಡುಹಿಡಿಯುತ್ತಾನೆ. ಮತ್ತೆ ಅಷ್ಟೇ ವೇಗವಾಗಿ ಅದನ್ನು ರಿಪೇರಿ ಕೂಡಾ ಮಾಡುತ್ತಾನೆ.

ಕೊಯಮತ್ತೂರಿನಲ್ಲಿ ಸ್ವಂತ ಅಂಗಡಿ ನಿರ್ವಹಿಸುತ್ತರುವ ೩೨ ವರ್ಷದ ಸುರೇಶ್‌ ಕುಮಾರ್‌ ಎಂಬುವವರೇ ಈ ಮಿರಾಕಲ್‌ ಮ್ಯಾನ್‌. ಇವರು ಮಿಕ್ಸಿ, ಗ್ರೈಂಡರ್‌ ಮುಂತಾದುವುಗಳನ್ನು ಕೇಲವ 10-15 ನಿಮಿಷಗಳಲ್ಲೇ ರಿಪೇರಿ ಮಾಡಿ ಜನರ ಅಚ್ಚರಿಗೆ ಕಾರಣರಾಗುತ್ತಾರೆ. ಕೇವಲ ಅವುಗಳನ್ನು ಮುಟ್ಟಿ ನೋಡಿಯೇ ಇದಕ್ಕೆ ಇಂತ ಸಮಸ್ಯೆ ಇದೆ ಎಂದು ಹೇಳಿಬಿಡುತ್ತಾನೆ. ಈ ಕಾರಣದಿಂದಾಗಿಯೇ ಸುರೇಶ್‌ ಕುಮಾರ್‌ ಕೊಯಮತ್ತೂರಿನಲ್ಲಿ ಸಖತ್‌ ಪೇಮಸ್‌ ಆಗಿದ್ದಾನೆ.

ಅಂದಹಾಗೆ ಸುರೇಶ್‌ಕುಮಾರ್‌ಗೆ ಆರು ವರ್ಷವಾಗುವವರೆಗೂ ಕಣ್ಣು ಸರಿಯಾಗಿಯೇ ಕಾಣಿಸುತ್ತಿತ್ತು. ಆದ್ರೆ ಆ ಸಮಯದಲ್ಲಿ ಬಂದ ಮೆದುಳು ಜ್ವರದಿಂದ ಆತ ದೃಷ್ಟಿ ಕಳೆದುಕೊಳ್ಳುತ್ತಾರೆ. ಸಂಪೂರ್ಣ ದೃಷ್ಟಿ ಇಲ್ಲ. ಆದರೂ ಐದನೇ ತರಗತಿವರೆಗೆ ಓದುತ್ತಾನೆ. ಅನಂತರ ಮನೆಯ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದ್ದ ಕಾರಣ ಕೆಲಸ ಮಾಡಲು ತೀರ್ಮಾನಿಸುತ್ತಾನೆ. ಇದೇ ವೇಳೆ ನೆರವಿಗೆ ಬಂದ ಅಕ್ಕ ರೇವತಿ, ಎಲೆಕ್ಟ್ರಿಕಲ್‌ ರಿಪೇರಿ ಅಂಗಡಿಯೊಂದರಲ್ಲಿ ತರಬೇತಿ ಕೊಡಿಸುತ್ತಾಳೆ. ಇದರಲ್ಲಿ ಮಿಕ್ಸಿ, ವಾಷಿಂಗ್‌ ಮಷಿನ್‌ ಮುಂತಾದವುಗಳು ರಿಪೇರಿ ಕಲಿತ ಸುರೇಶ್‌ ಕುಮಾರ್‌ ಕಳೆದ ಆರು ತಿಂಗಳ ಹಿಂದೆ ಕೊಯಮತ್ತೂರಿನಲ್ಲಿ ಸ್ವಂತ ಎಲೆಕ್ಟ್ರಿಕಲ್‌ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.

Share Post