DistrictsPolitics

ಇಂದು ಕ್ಯಾಮರಾ ಇಡ್ತಾರೆ, ನಾಳೆ ಬಾಂಬ್‌ ಇಡ್ತಾರೆ; ಶಾಸಕ ಯಶ್‌ಪಾಲ್‌ ಸುವರ್ಣ

ಉಡುಪಿ; ಉಡುಪಿಯ ಖಾಸಗಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸಿದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಈ ಪ್ರಕರಣದ ಸಂಬಂಧ ನಿನ್ನೆ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್‌ ಅವರು, ತಮಾಷೆಗಾಗಿ ಹೀಗೆ ಮಾಡಿದ್ದಾರೆ. ಅದನ್ನೇ ದೊಡ್ಡದು ಮಾಡಲಾಗುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಶಾಸಕ ಯಶ್‌ಪಾಲ್‌ ಸುವರ್ಣ ಅವರು ತೀಕ್ಷ್ಣವಾಗಿ ಉತ್ತರ ಕೊಟ್ಟಿದ್ದಾರೆ.

ಗೃಹಸಚಿವರು ಮಕ್ಕಳಾಟ ಎಂದು ಹೇಳಿದ್ದಾರೆ. ಅದು ಹೇಗೆ ಮಕ್ಕಳಾಟವಾಗುತ್ತದೆ..? ಇಂದು ಕ್ಯಾಮರಾ ಇಡುತ್ತಾರೆ, ನಾಳೆ ಬಾಂಬ್‌ ಕೊಟ್ಟರೂ ಇಡುತ್ತಾರೆ. ಹೀಗಾಗಿ ಈ ಪ್ರಕರಣ ಸಮಗ್ರವಾಗಿ ತನಿಖೆಯಾಗಬೇಕು ಎಂದು ಯಶ್‌ಪಾಲ್‌ ಸವರ್ಣ ಒತ್ತಾಯ ಮಾಡಿದ್ದಾರೆ. ಇನ್ನು ಗೃಹ ಸಚಿವ ಜಿ.ಪರಮೇಶ್ವರ್‌ ಮಗ ಲಿಂಗಪರಿವರ್ತನೆ ಮಾಡಿಕೊಂಡಿರುವುದರ ಬಗ್ಗೆಯೂ ಶಾಸಕರು ಕೇವಲವಾಗಿ ಮಾತನಾಡಿದ್ದಾರೆ.

 

Share Post