NationalPolitics

ಇವತ್ತು ಬಿಜೆಪಿ ಪಟ್ಟಿ ರಿಲೀಸ್‌ ಇಲ್ಲ; ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ; ಎರಡು ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ನಾಯಕರು ಸತವಾಗಿ ಮೀಟಿಂಗ್‌ಗಳನ್ನು ಮಾಡುತ್ತಿದ್ದಾರೆ. ಇವತ್ತೂ ಕೂಡಾ ಸತತವಾಗಿ ಸಭೆಗಳನ್ನು ನಡೆಸಿದರೂ, ಇಂದು ಬಿಜೆಪಿ ಮೊದಲ ಪಟ್ಟಿ ರಿಲೀಸ್‌ ಆಗುತ್ತಿಲ್ಲ. ನಾಳೆ ಅಥವಾ ನಾಡಿದ್ದು ಬಿಜೆಪಿ ಮೊದಲ ಪಟ್ಟಿ ರಿಲೀಸ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮಾಹಿತಿ ನೀಡಿದ್ದಾರೆ.

ನಾಳೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದೇ ಮೊದಲ ಪಟ್ಟಿ ರಿಲೀಸ್‌ ಆಗುತ್ತೆ ಎಂದು ಹೇಳಲಾಗುತ್ತಿತ್ತು. ಅದಕ್ಕಾಗಿ ಸತತವಾಗಿ ಸಭೆಗಳನ್ನು ನಡೆಸಲಾಯಿತು. ಆದ್ರೆ ಕೇಂದ್ರದ ನಾಯಕರು ಕೆಲ ಕ್ಷೇತ್ರಗಳಲ್ಲಿ ರಿ ಸರ್ವೇ ಮಾಡಲು ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ರಿ ಸರ್ವೇ ನಡೆಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಸರ್ವೆ ರಿಪೋರ್ಟ್‌ ಕೈ ತಲುಪಿದ ಮೇಲೆ ಪಟ್ಟಿಯನ್ನು ಸಂಜೆ ಅಂತಿಮಗೊಳಿಸಿ, ನಾಳೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸದ್ಯ ಜೆಪಿ ನಡ್ಡಾ ನಿವಾಸದಲ್ಲಿ ಹೈವೋಲ್ಟೇಜ್‌ ಸಭೆ ನಡೆಯುತ್ತಿದೆ. ಇಂದು ಶತಾಗತಾಯ ಮೊದಲ ಪಟ್ಟಿಯನ್ನು ಬಿಜೆಪಿ ಫೈನಲ್‌ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಮೊದಲ ಪಟ್ಟಿಯಲ್ಲಿ 170-180 ಕ್ಷೇತ್ರಗಳ ಟಿಕೆಟ್‌ ಘೋಷಣೆಯಾಗಲಿದೆ ಎಂದು ಹೇಳಲಾಗಿದೆ.

Share Post