National

ಕೇರಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶ

ತಿರುವನಂತಪುರಂ : ಕೇರಳದ ಆಲಪ್ಪುಳದ ಕುಟ್ಟನಾಡ್‌ ಪ್ರದೇಶದಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವ ಹಿನ್ನೆಲೆ, ಮೊಟ್ಟೆ, ಕೋಳಿಗಳನ್ನು ನಾಶ ಮಾಡುವಂತೆ ಸರ್ಕಾರ ಆದೇಶ ಮಾಡಿದೆ. ಆಲಪುಳ್ಳ ಜಿಲ್ಲೆಯ ಕೋಟ್ಟನಾಡ್‌ನಲ್ಲಿ ಸಾವಿರಾರು ಬಾತುಕೋಳಿಗಳು ಸತ್ತ ಹಿನ್ನೆಲೆ ಅಧಿಕಾರಿಗಳು ಭೋಪಾಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ಗೆ ಮಾದರಿಗಳನ್ನು ಕಳುಹಿಸಿದ್ದರು.

ಹಕ್ಕಿಜ್ವರ ದೃಢಪಟ್ಟ ಕಾರಣ ಪಶುವೈದ್ಯಾಧಿಕಾರಿಗಳು ಪ್ರಕರಣ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು ಮತ್ತು ಇತರ ಪಕ್ಷಿಗಳನ್ನು ನಾಶಗೊಳಿಸಲು ಆದೇಶಿಸಿದ್ದಾರೆ.

Share Post