ಫ್ಲೈಓವರ್ ಮೇಲೆ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಗಂಡ; ಮೂರ್ಛೆ ಹೋದರೂ ಬಿಡಲಿಲ್ಲ!
ಚೆನ್ನೈ; ಗಂಡ-ಹೆಂಡತಿ ನಡುವೆ ಜಗಳಗಳು ಕಾಮನ್.. ಜಗಳ ಮನೆಗೆ ಸೀಮಿತಿ ಆಗಬೇಕು.. ಆದ್ರೆ ಇಲ್ಲೊಬ್ಬ ದುರುಳ ತನ್ನ ಪತ್ನಿಯನ್ನು ಫ್ಲೈಓವರ್ ಮೇಲೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.. ಆಕೆ ಪ್ರಜ್ಞೆ ತಪ್ಪಿದರೂ ಬಿಡದೇ ಹಲ್ಲೆ ಮಾಡಿದ್ದು, ಆ ದೃಶ್ಯಗಳನ್ನು ವಾಹನ ಸವಾರರು ಸೆರೆ ಹಿಡಿದಿದ್ದಾರೆ.. ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ..
ತಮಿಳುನಾಡಿನ ರಾಜಧಾನಿ ಚೆನ್ನೈ ನಗರದ ಕೊಯಂಬೆಡಿ ಬ್ರಿಡ್ಜ್ ಮೇಲೆ ಈ ಘಟನೆ ನಡೆದಿದೆ.. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಜಗಳವಾಡಿದ್ದು, ಅನಂತರ ಗಂಡ ತನ್ನ ಹೆಂಡತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಫ್ಲೈಓಬರ್ ಮೇಲೆ ಬಂದಿದ್ದಾನೆ.. ಬೈಕ್‌ನಲ್ಲಿ ಹೋಗುವಾಗಲೂ ಜಗಳ ಮುಂದುವರೆದಿದ್ದು, ಗಂಡ ತನ್ನ ಹೆಂಡತಿಯನ್ನು ಫ್ಲೈಓವರ್ ಮೇಲೆಯೇ ಚೆನ್ನಾಗಿ ಥಳಿಸಿದ್ದಾನೆ.. ಆಕೆ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದರೂ ಬಿಡದೇ ಚೆನ್ನಾಗಿ ಹೊಡೆದಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ..
ಇತರ ಬೈಕ್ ಸವಾರರು ತಡೆಯಲು ಬಂದರೂ ಪ್ರಯೋಜನವಾಗಿಲ್ಲ.. ಜೊನೆಗೆ ಬೈಕ್ ಸವಾರನೊಬ್ಬ ಪೊಲೀಸರು ಬರುತ್ತಿದ್ದಾರೆ ಎಂದು ಬೆದರಿಸಿದ್ದಾನೆ.. ಆಗ ತನ್ನ ಹೆಂಡತಿಯನ್ನು ಎಳೆದು ಬೈಕ್ ಮೇಲೆ ಕೂರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ..
ಪತ್ನಿಯನ್ನು ಹೊಡೆಯುವ ದೃಶ್ಯವನ್ನು ಬೈಕ್ ಸವಾರರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.. ಇದನ್ನಾಧರಿಸಿ ಪೊಲೀಸರು ಆರೋಪಿ ರೋಷನ್‌ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ..