National

ತಾಳ್ಮೆ ಕಳೆದುಕೊಂಡ ಪತಂಜಲಿ ಬ್ರಾಂಡ್ ಅಂಬಾಸಿಡರ್‌:‌ ಪತ್ರಕರ್ತ ಕೇಳಿದ ಪ್ರಶ್ನೆಗೆ ಗರಂ

ಹರಿಯಾಣ: ಹೆಚ್ಚುತ್ತಿರುವ ತೈಲ ಬೆಲೆ ಬಗ್ಗೆ ಪ್ರಶ್ನೆ ಮಾಡಿದ ಪತ್ರಕರ್ತರಿಗೆ ಪತಂಜಲಿ ಉತ್ಪನ್ನಗಳ ಬ್ರಾಂಡ್‌ ಅಂಬಾಸಿಡರ್‌ ಆದ ಬಾಬಾ ರಾಮ್‌ದೇವ್‌ ಸಿಟ್ಟಾಗಿದ್ದಾರೆ. ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸುವ ಅಗತ್ಯವಿಲ್ಲ. ಮಾತಾಡದಂತೆ ಕುಳಿತುಕೊಳ್ಳಿ .. ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಬೇಡಿ.. ಈ ರೀತಿ ಮಾತನಾಡುವುದು ಒಳ್ಳೆಯದಲ್ಲ ಎಂಬ ಮಾತನ್ನು ಹೇಳಿದ್ರು.

2014ರಲ್ಲಿ ಬಾಬಾ ರಾಮ್‌ದೇವ್ ಜನರನ್ನು ಉದ್ದೇಶಿಸಿ ಲೀಟರ್‌ಗೆ ರೂ. 40 ಪೆಟ್ರೋಲ್,  300ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡುವ ಸರ್ಕಾರವನ್ನು ಜನರ ಆಯ್ಕೆ ಮಾಡುಬೇಕು ಎಂಬ ಮಾತನ್ನು ಹೇಳಿದ್ರು. ಇದನ್ನೇ ಇಂದು ಪತ್ರಕರೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಗರಂ ಆಗಿದ್ದಾರೆ. ನೀನು ನಿನ್ನ ಹೆತ್ತವರಿಗೆ ಒಳ್ಳೆಯ ಮಗನಾಗಿ ಇರಿ ಎಂಬ ಮಾತನ್ನು ಹೇಳಿದ್ರು.

ಬಾಬಾ ರಾಮ್‌ದೇವ್  ಕಷ್ಟದ ಸಮಯದಲ್ಲಿ ಜನ ಕಷ್ಟಪಟ್ಟು ಕೆಲಸ ಮಾಡುವಂತೆ ಜನರಿಗೆ ಕಿವಿ ಮಾತನ್ನು ಹೇಳಿದ್ರು. ‘ಇಂಧನ ಬೆಲೆ ಕುಸಿದರೆ ತೆರಿಗೆ ಪಡೆಯುವುದಿಲ್ಲ ಎಂದು ಸರ್ಕಾರ ಹೇಳುತ್ತೆ. ಆದರೆ ನಂತರ ಅವರು ದೇಶವನ್ನು ಹೇಗೆ ಮುನ್ನಡೆಸುತ್ತಾರೆ..ಉದ್ಯೋಗಿಗಳಿಗೆ ಹೇಗೆ ಸಂಬಳ ನೀಡ್ತಾರೆ..?  ಹಣದುಬ್ಬರ ಕಡಿಮೆಯಾಗಬೇಕು ಇದನ್ನು ನಾನು ಕೂಡ ಒಪ್ಪುತ್ತೇನೆ. ಅದಕ್ಕೆ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಬೇಕು.

ಈ ವಿಚಾರವನ್ನು ನಾನು ಒಪ್ಪುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ರಾಜ್ಯದ ಜನತೆ ಶ್ರಮಿಸಬೇಕು. ನಾನು ಬೆಳಿಗ್ಗೆ 4 ಗಂಟೆಗೆ ಎಚ್ಚರಗೊಂಡು ರಾತ್ರಿ 10 ರವರೆಗೆ ಕೆಲಸ ಮಾಡುತ್ತೇನೆ. ಇದೇ ವೇಳೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 80 ಪೈಸೆ ಹೆಚ್ಚಿಸಿದೆ. ಕಳೆದ ಒಂಬತ್ತು ದಿನಗಳಲ್ಲಿ ರೂ. 5 ಕ್ಕಿಂತ ಹೆಚ್ಚಳವಾಗಿದೆ.

Share Post