National

ಕಲೆಗೆ ವಯಸ್ಸಿನ ಅಂತರವಿಲ್ಲ: ವೃದ್ಧೆಯ ಸಾಹಸಗಾಥೆ

ತಮಿಳುನಾಡು: ಕಲೆಗೆ ವಯಸ್ಸಿನ ಮಿತಿಯಿಲ್ಲ, ಆಸಕ್ತಿ ಇದ್ರೆ ಯಾವುದೇ ಕೆಲಸವನ್ನಾದ್ರೂ ಎಷ್ಟೇ ವಯಸ್ಸಿನವರಾದ್ರೂ ಸಲೀಸಾಗಿ ಮಾಡಬಹುದು ಅದಕ್ಕೆ ತಾಜಾ ಉದಾಹರಣೆ ಈ 85ರ ಹರೆಯದ ಅಜ್ಜಿ. ವಯಸ್ಸು ನೋಡಿದ್ರೆ ರಿಟೈರ್‌ಮೆಂಟ್‌ ತಗೊಂಡು ಆರಾಮಾಗಿ ಮಕ್ಕಳು, ಮೊಮ್ಮಕ್ಕಳ ಜೊತೆ ಆಟವಾಡಬೇಕಾದ ವಯಸ್ಸಲ್ಲಿ, ಇಡೀ ಊರಿನ ಜನತೆಗೆ ಮಾದರಿಯಾಗಿದ್ದಾರೆ.

ಪುಟ್ಟ ಮಕ್ಕಳಿಂದ ಹಿಡಿದು ಯುವ ಪ್ರತಿಭೆಗಳಿಗೂ ಈ ಅಜ್ಜಿ ತರಬೇತುದಾರರಾಗಿ ಮಾದರಿಯಾಗಿದ್ದಾರೆ. ಅಷ್ಟಕ್ಕೂ ಇವರ ಸಾಧನೆ ಏನು ಅಂತೀರಾ.. ಈಜುವುದು, ಹೌದು ಈಜುವುದೇ ಈ ಕೆಲಸ ಅಷ್ಟು ಸುಲಭವಲ್ಲ, ಸ್ವಲ್ಪ ಯಾಮಾರಿದ್ರೂ ಯಮನ ಪಾದ ಗ್ಯಾರೆಂಟಿ ಯುವಕರಿಗೇ ಕಷ್ಟಸಾಧ್ಯವಾಗುವ ಕೆಲಸವನ್ನು ಈ 85ರ ಅಜ್ಜಿ ಸಲೀಸಾಗಿ ಈಜುತ್ತಾರೆ.

ಎಂತಹ ಬಾವಿ, ಕೆರೆ, ನದಿ, ಎಲ್ಲೇ ಬಿಟ್ರೂ ನೀರು ಕುಡಿದಷ್ಟು ಆರಾಮಾಗಿ ಸ್ವಿಮ್ಮಿಂಗ್‌ ಮಾಡ್ತಾರೆ. ಈ ಅಜ್ಜಿ ಅಂದಾಗೆ ಈ ಅಜ್ಜಿಗೆ ಈ ವಿದ್ಯೆ ತನ್ನ ತಂದೆಯಿಂದ ಬಂದಿದ್ದಂತೆ. ಈ ಅಜ್ಜಿ ಹೆಸರು ಪಾಪಾ ಅಂತ ಇವರು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ರಾಶಿಪುರಂನ ವೆನಂದೂರಿನಲ್ಲಿ ವಾಸಿಸುತ್ತಾರೆ. ಆ ಊರಿಗೆಲ್ಲ ಈ ಅಜ್ಜಿಯ ಈಜು ತರಬೇತುದಾರರು. ತಾನು ಐದು ವರ್ಷದವಳಿದ್ದಾಗಿನಿಂದ ಕಲಿತ ವಿದ್ಯೆ ಮಣ್ಣಪಾಲಾಗಲಿಲ್ಲ.

ಎಷ್ಟೋ ಮಕ್ಕಳಿಗೆ ಈ ವಿದ್ಯೆಯನ್ನು ಕಲಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಈ ಪಾಪಾ ಅಜ್ಜಿ. ಫ್ರಿಸ್ಟೈಲ್​, ಸೈಡ್​ಸ್ಟ್ರೋಕ್​, ಬ್ಯಾಕ್​ ಸ್ಟ್ರೋಕ್​ ಸೇರಿದಂತೆ ಹಲವು ವಿಧದ ಈಜು ಕಲಿತ ಅಜ್ಜಿ 80ದಾಟಿದರೂ ಇನ್ನು ಕಲಿಸಬೇಕೆಂಬ ಹಂಬಲ ಇದೆ ಅಂತಾರೆ ಅಜ್ಜಿ.

Share Post