National

ತಿರುಮಲದಲ್ಲಿ 3 ಕಡೆ ಗುಡ್ಡ ಕುಸಿತ; ಭರದಿಂದ ಸಾಗಿದ ದುರಸ್ತಿ ಕಾರ್ಯ

ತಿರುಮಲ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಳೆದ 15 ದಿನಗಳಿಂದ ಎಡೆಬಿಡದೆ ಭಾರಿ ಮಳೆ ಸುರಿದು ಅವಾಂತರ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ಟಿಟಿಡಿಗೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಇನ್ನು ಮಳೆ ಕಾರಣದಿಂದಾಗಿ ಸಡಿಲಗೊಂಡಿದ್ದ ತಿರುಮಲ ಬೆಟ್ಟದ ಗುಡ್ಡಗಳು ಕುಸಿಯಲಾರಂಭಿಸಿದೆ.

ತಿರುಮಲ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಮೂರು ಕಡೆ ಗುಡ್ಡಗಳು ಕುಸಿದುಬಿದ್ದಿವೆ. ರಸ್ತೆ ಕೂಡಾ ಕುಸಿದಿದೆ. ಜೊತೆಗೆ ಇಳಿಯುವ ರಸ್ತೆಯಲ್ಲೂ ಕೂಡಾ ದೊಡ್ಡ ದೊಡ್ಡ ಬಂಡೆಗಳು ರಸ್ತೆಗೆ ಅಡ್ಡಲಾಗಿದೆ ಬಿದ್ದಿವೆ. ಈ ಕಾರಣದಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇನ್ನು ಮೆಟ್ಟಿಲ ದಾರಿಯಲ್ಲೂ ಕೂಡಾ ಅಲ್ಲಲ್ಲಿ ಮೆಟ್ಟಿಲುಗಳು ಕೊಚ್ಚಿಕೊಂಡುಹೋಗಿವೆ. ಮೆಟ್ಟಿಲ ಪಕ್ಕ ಅಳವಡಿಸಿ, ಸರಳುಗಳು ಹಾಗೂ ತಡೆಗೋಡೆಗಳು ಕೂಡಾ ಕಿತ್ತುಹೋಗಿವೆ. ಹೀಗಾಗಿ ಟಿಟಿಡಿ ಭರದಿಂದ ಇವುಗಳನ್ನು ಸರಿಪಡಿಸುವ ಕಾರ್ಯದಲ್ಲಿ ಮಗ್ನವಾಗಿದೆ.

Share Post