ಸ್ಪರ್ಶ ಸಿನಿಮಾದಲ್ಲಿ ಹಾಡಿದ್ದ ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ಇನ್ನಿಲ್ಲ
ಮುಂಬೈ; ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ನಿಧನರಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪಂಕಜ್ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಹತ್ತು ದಿನಗಳಿಂದ ಪಂಕಜ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು… ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪಂಕಜ್ ಉದಾಸ್ ಅವರಿಗೆ 72 ವರ್ಷ ವಯಸ್ಸಾಗಿತ್ತು. 90ರ ದಶಕದಲ್ಲಿ ಇವರ ಹಾಡುಗಳು ತುಂಬಾನೇ ಜನಪ್ರಿಯವಾಗಿದ್ದವು. ಹಿಂದಿಯಲ್ಲದೆ, ಕನ್ನಡ ಹಾಗೂ ಹಲವು ಭಾಷೆಗಳಲ್ಲಿ ಅವರು ಹಾಡಿದ್ದು, ಅವರು ಹಾಡಿದ ಹಾಡುಗಳು ತುಂಬಾನೇ ಜನಪ್ರಿಯವಾಗಿವೆ.
90ರ ದಶಕದಲ್ಲಿ ಪಂಕಜ್ ಉದಾಸ್ ಜನಪ್ರರಿಯ ಗಾಯಕರಾಗಿದ್ದರು.. ಕನ್ನಡ ಮತ್ತು ಹಿಂದಿ ಸಿನಿಮಾಗಳ ಹಾಡಿನಿಂದ ಅವರು ಜನಪ್ರಿಯತೆ ಗಳಿಸಿಕೊಂಡಿದ್ದರು. ಕಿಚ್ಚ ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ಬರೆಯದ ಮೌನದ ಕವಿತೆ ಹಾಗೂ ಚಂದಕ್ಕಿಂತ ಚಂದ ನೀನೇ ಸುಂದರ ಹಾಡುಗಳನ್ನು ಹಾಡಿದವರು ಇವರೇ. ಇನ್ನು ಹಿಂದಿಯ ಛಿಟ್ಟಿ ಆಯಿಹೈ , ಸಾಜನ್ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. 2006ರಲ್ಲಿ ಪಂಕಜ್ ಉದಾಸ್ ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತ್ತು.
ಪಂಕಜ್ ಉದಾಸ್ ನಿಧನಕ್ಕೆ ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಭಿಮಾನಿಗಳ ಕಂಬನಿ ಮಿಡಿದಿದ್ದಾರೆ.