National

ನಾಳೆ ಭೂಮಿಯ ಹತ್ತಿರಕ್ಕೆ ಬರುತ್ತಂತೆ ಕ್ಷುದ್ರಗ್ರಹ..!

ನವದೆಹಲಿ: ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುತ್ತೆ. ಹತ್ತಿರಕ್ಕೆ ಬರುತ್ತೆ ಎಂಬ ಸುದ್ದಿಗಳು ಆಗಾಗ ಬರುತ್ತಿರುತ್ತವೆ. ಆದ್ರೆ ಈ ಬಾರಿ ದೈತ್ಯ ಕ್ಷುದ್ರಗ್ರಹ ಭೂಮಿಯ ಹತ್ತಿರಕ್ಕೆ ಬರುತ್ತಿದೆ. ನಾಳೆ ಮಧ್ಯಾಹ್ನ ೨.೪೫ರ ಸುಮಾರಿಗೆ ಭೂಮಿಯ ಸಮೀಪದಲ್ಲಿ ಕ್ಷುದ್ರಗ್ರಹ ಹಾದುಹೋಗಲಿದೆ ಎಂದು ತಿಳಿದುಬಂದಿದೆ.

ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ಈ ಮಾಹಿತಿ ನೀಡಿದೆ.  7482 (1994 PC1) ಎಂದು ಹೆಸರಿಸಲಾದ 3450 ಅಡಿ ಗಾತ್ರದ ಕ್ಷುದ್ರಗ್ರಹ ಇದಾಗಿದೆ ಎಂದು ತಿಳಿದುಬಂದಿದೆ. ಭೂಮಿಯಿಂದ ಚಂದ್ರ ಇರುವ ದೂರಕ್ಕಿಂತ ಐದು ಪಟ್ಟು ದೂರದಲ್ಲಿ ಈ ಕ್ಷುದ್ರಗ್ರಹ ಹಾದುಹೋಗಲಿದೆ. ಹೀಗಾಗಿ ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದು ನಾಸಾ ಹೇಳಿದೆ. ಭೂಮಿ ಮೇಲಿನ ಅತಿದೊಡ್ಡ ಕಟ್ಟಡಕ್ಕಿಂತಲೂ ಈ ಕ್ಷುದ್ರಗ್ರಹ ದೊಡ್ಡದಿದೆ ಎಂದು ಗೊತ್ತಾಗಿದೆ.

ಕ್ಷುದ್ರಗ್ರಹ ಹಾದುಹೋಗುವುದನ್ನು ನಾವು ಕೂಡಾ ನೋಡಬಹುದೆಂದು ಇಸ್ರೋ ಹೇಳಿದ್ದು, ಇದನ್ನ ನೋಡಲು ಒಂದು ಲಿಂಕ್‌ ಒಂದನ್ನು ಇಸ್ರೋ ವಿಜ್ಞಾನಿಗಳು ಟ್ವೀಟ್‌ನಲ್ಲಿ ಲಗತ್ತಿಸಿದ್ದಾರೆ. ಆ ಲಿಂಕ್‌ ಮೂಲಕ ಕ್ಷುದ್ರಗ್ರಹವನ್ನು ವೀಕ್ಷಣೆ ಮಾಡಬಹುದು.

Share Post