Districts

ಮೋದಿಯೇ ಹೇಳಿದ್ದಾರೆ ಮಾಸ್ಕ್‌ ಹಾಕಲ್ಲ ಎಂದ ಕತ್ತಿ ಈಗ ಯೂಟರ್ನ್‌

ಬೆಂಗಳೂರು: ಮೋದಿಯೇ ಹೇಳಿದ್ದಾರೆ. ಮಾಸ್ಕ್‌ ಧರಿಸಲೇಬೇಕೆಂಬ ನಿಯಮವಿಲ್ಲ. ಮಾಸ್ಕ್‌ ಧರಿಸುವುದು ಬಿಡುವುದು ಅವರವರಿಗೆ ಬಿಟ್ಟಿದ್ದು ಎಂದು ಹೇಳಿ ಟ್ರೋಲ್‌ಗೆ ಒಳಗಾಗಿ ಸಚಿವ ಉಮೇಶ್‌ ಕತ್ತಿ ಈಗ ಯೂ ಟರ್ನ್‌ ಹೊಡೆದಿದ್ದಾರೆ.

ನಿನ್ನೆ ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಉಮೇಶ್‌ ಕತ್ತಿ ಸೇರಿ ಬಹುತೇಕರು ಮಾಸ್ಕ್‌ ಧರಿಸಿರಲಿಲ್ಲ. ಈ ಬಗ್ಗೆ ಸಚಿವರಿಗೆ ಮಾಧ್ಯಮ ಪ್ರತಿನಿಧಿಗಳು ಮಾಸ್ಕ್‌ ಯಾಕೆ ಧರಿಸಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಸಚಿವರು, ಮಾಸ್ಕ್‌ ಧರಿಸಲೇಬೇಕು ಎಂದು ಕಾನೂನು ಮಾಡಿಲ್ಲ. ಮಾಸ್ಕ್‌ ಧರಿಸುವುದು ಬಿಡುವುದು ಅವರವರಿಗೆ ಬಿಟ್ಟಿದ್ದು ಎಂದು ಹೇಳಿದ್ದರು.

ಸಚಿವ ಕತ್ತಿ ಹೇಳಿದ ಮಾತು ವೈರಲ್‌ ಆಗುತ್ತಿದ್ದಂತೆ ಸಚಿವರು ಎಚ್ಚೆತ್ತುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಹೇಳಿಕೆ ಕುರಿತು ಸಮಜಾಯಿಷಿ ನೀಡಿದ್ದಾರೆ‌.  ಮಾಸ್ಕ್ ಧರಿಸುವ ವಿಚಾರದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಪಾಲಿಸಬೇಕು ಅನ್ನುವುದು ನನ್ನ ಹೇಳಿಕೆಯಾಗಿತ್ತು. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ಹೇಳಿದ್ದಾರೆ.

Share Post