National

ಇಲ್ಲಿ ಯುವತಿಯರೇ ಡ್ರಗ್‌ ಪೆಡ್ಲರ್ಸ್‌; ಸಿಕ್ಕಿಬಿದ್ದಿದ್ದು ಹೇಗೆ..?

ಗೋವಾ: ಗೋವಾದಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳಾ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ನಾರ್ತ್‌ ಗೋವಾದ ಅರ್ಪೋರಾ ಬಳಿ ದಾಳಿ ನಡೆಸಿರುವ ಗೋವಾ ಎನ್‌ಸಿಬಿ ಹಾಗೂ ಮುಂಬೈ ಎನ್‌ಸಿಬಿ ತಂಡಗಳು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಿರಾಕಿಗಳ ವೇಷದಲ್ಲಿ ದಾಳಿ ಮಾಡಿರುವ ಅಧಿಕಾರಿಗಳು, ಒಬ್ಬ ಭಾರತೀಯ ಯುವತಿ ಹಾಗೂ ಮತ್ತೊಬ್ಬಳು ವಿದೇಶಿ ಯುವತಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಹಲವು MDMA ಮಾತ್ರೆಗಳು ಹಾಗೂ ಹೆರಾಯಿನ್‌ ಪೌಡರ್‌ನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೇಸ್‌ ದಾಖಲಿಸಲಾಗಿದ್ದು, ಕೋರ್ಟ್‌ ಮುಂದೆ ಇಬ್ಬರನ್ನೂ ಹಾಜರುಪಡಿಸಲಾಗಿತ್ತು. ಇಬ್ಬರೂ ಆರೋಪಿಗಳಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ. ಇದರ ಹಿಂದೆ ದೊಡ್ಡ ಗ್ಯಾಂಗ್‌ ಇರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ.

Share Post