ಕಾಯಕಯೋಗಿಯ ಪುಣ್ಯಸ್ಮರಣೆ: ಗದ್ದುಗೆಗೆ ವಿಶೇಷ ಪೂಜೆ
ತುಮಕೂರು: ನಡೆದಾಡುವ ದೇವರು, ಕಾಯಕಯೋಗಿ, ತ್ರಿವಿಧ ದಾಸೋಹಿ, ಆಧುನಿಕ ಬಸವಣ್ಣ ಎಂದೇ ಪೂಜಿಸುವ ಶ್ರೀ ಶಿವಕುಮಾರ ಸ್ವಾಮಿಗಳ ಮೂರನೇ ವರ್ಷದ ಪುಣ್ಯಸ್ಮರಣೆ ಇಂದು. ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಮಠದ ದೇವರು ಸಿದ್ದಲಿಂಗೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಿದ್ದಾರೆ. ಮಠದ ವಿದ್ಯಾರ್ಥಿಗಳು, ಮುಖ್ಯಮಂತ್ರಿ, ಶಾಸಕರು, ಸಚಿವರು ಸೇರಿದಂತೆ ನಾಡಿನಾದ್ಯಂತ ಲಕ್ಷಾಂತರ ಮಂದಿ ಭಕ್ತರು ಶಿವಯೋಗಿಯನ್ನು ಸ್ಮರಿಸುತ್ತಿದ್ದಾರೆ.
ಇಂದು ದಾಸೋಹ ದಿನ ಎಂದೂನ ಕರೆಯುತ್ತಿದ್ದಾರೆ. 36ಗಂಟೆಗಳಲ್ಲಿ ಸುಮಾರು 45ಲಕ್ಷ ಜನರಿಗೆ ಅನ್ನ ಉಣಬಡಿಸಿದ ಖ್ಯಾತಿ ಸಿದ್ದಗಂಗಾ ಮಠಕ್ಕಿದೆ. ಕಾಯಕಯೋಗಿ ಅಗಲಿದ ದಿನ ಇಡೀ ರಾಜ್ಯಾದ್ಯಂತ ಶೋಕ ಮಡುಗಟ್ಟಿತ್ತು. ಇಂತಹ ಸಂತನನ್ನು ಪಡೆದ ನಾವೇ ಧನ್ಯರು ಅಂತಿದಾರೆ ಭಕ್ತ ಕುಟುಂಬ.
ಕೊರೊನಾ ಕಾರಣದಿಂದಾಗಿ ಪುಣ್ಯಸ್ಮರಣೆ ಆಚರಣೆ ಬಹಳ ಸರಳವಾಗಿ ನಡೆಯಲಿದೆ ಎಂದು ಮಠಧ ಆಡಳಿತ ಮಂಡಳಿ ತಿಳಿಸಿದೆ. ಮಠಕ್ಕೆ ಬರುವ ಭಕ್ತರಿಗೆ ಎಂದಿನಬಂತೆ ದಾಸೋಹ ಇರಲಿದೆ. ಆದರೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮತ್ತು ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆದು ಬೆಂಗಳೂರಿಗೆ ವಾಪಸಾಗಲಿದ್ದಾರೆ.