Districts

ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ; ಕುಸಿದುಬಿದ್ದ ಶಾಲೆಯ ಗೋಡೆ

ಬೆಳಗಾವಿ; ರಾಜ್ಯದ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದುಬಿದ್ದಿವೆ. ಖಾನಾಪುರ ತಾಲ್ಲೂಕಿನ ಮುಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಕೂಡಾ ಕಳೆದ ರಾತ್ರಿ ಕುಸಿದು ಬಿದ್ದಿದೆ. ನಿನ್ನೆ ಬೆಳಿಗ್ಗೆಯಿಂದಲೇ ಶಾಲೆಯ ಗೋಡೆ ಬಿರುಕು ಬಿಡಲು ಆರಂಭಿಸಿತ್ತು. ರಜಾ ದಿನವಾದ್ದರಿಂದ ಶಾಲೆಯಲ್ಲಿ ಯಾರೂ ಇರಲಿಲ್ಲ. ಮಕ್ಕಳು ಕೂಡ ಆಟದ ಮೈದಾನಕ್ಕೆ ಬಂದಿರಲಿಲ್ಲ. ಹೀಗಾಗಿ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಇನ್ನು ಮೊನ್ನೆ ಶನಿವಾರ ಗರ್ಲಗುಂಜಿ ಗ್ರಾಮದ ಶಾಲೆಯ ಗೋಡೆ ಕುಸಿದಿತ್ತು. ಇದೀಗ ಮುಡೇವಾಡಿ ಗ್ರಾಮದ ಶಾಲೆಯ ಗೋಡೆ ಕುಸಿದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ತಕ್ಷಣ ಅಧಿಕಾರಿಗಳು ಸುರಕ್ಷತೆ ಪರಿಶೀಲಿಸಬೇಕು ಎಂದು ಮುಡೇವಾಡಿ ಜನ ಆಗ್ರಹಿಸಿದ್ದಾರೆ.

 

Share Post