National

ಸೋರುತಿಹುದು ರೈಲು ಮಾಳಿಗೆ; ಛತ್ರಿ ಹಿಡಿದ ಪ್ರಯಾಣಿಕರು..!

ಮುಂಬೈ; ಮಳೆ ಬಂದಾಗ ಬಸ್‌ಗಳಲ್ಲಿ ನೀರು ಸೋರೋದನ್ನು ನೋಡಿದ್ದೇವೆ. ಇದೀಗ ರೈಲಿನಲ್ಲೂ ಇಂತಹ ದೃಶ್ಯ ಕಂಡುಬಂದಿದೆ. ಪಂಚವಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಳೆ ನೀರು ಸೋರಿಕೆಯಾಗಿದ್ದು, ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣ ಮಾಡಿದ್ದಾರೆ.

 

ಮಳೆಯಿಂದಾಗಿ  ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್‍ನ ಮಾಸಿಕ ಸೀಸನ್ ಟಿಕೆಟ್ ಹೊಂದಿರುವವರಿಗೆ ಕಾಯ್ದಿರಿಸಿದ ಎಸಿ ಕೋಚ್‍ನ ಮೇಲ್ಛಾವಣಿ ಸೋರಿಕೆಯಾಗುತ್ತಿತ್ತು. ಇದರಿಂದಾಗಿ ಪ್ರಯಾಣಿಕರು ವಿಧಿಯಿಲ್ಲದೆ ತಮ್ಮ ತಮ್ಮ ಬ್ಯಾಗ್‌ಗಳಲ್ಲಿದ್ದ ಛತ್ರಿಗಳನ್ನು ಹೊರತೆಗೆಯಬೇಕಾಯಿತು. ನಾಸಿಕ್‌ನಿಂದ ಮುಂಬೈವರೆಗೂ ಪ್ರಯಾಣ ಇದೇ ರೀತಿ ಸಾಗಿದ್ದು, ಪ್ರಯಾಣಿಕರು, ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

ಸಿ-2 ಹವಾನಿಯಂತ್ರಿತ ಕೋಚ್‍ನ ಮೇಲ್ಛಾವಣಿಯಿಂದ ನೀರು ಜಿನುಗುತ್ತಲೇ ಇತ್ತು. ಇದರಿಂದಾಗಿ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು ಎಂದು ಪ್ರಯಾಣಿಕರೊಬ್ಬರು ಗೋಳು ತೋಡಿಕೊಂಡಿದ್ದಾರೆ. ರೈಲು ಸಂಪೂರ್ಣ ಭರ್ತಿಯಾಗಿದ್ದರಿಂದ ಪ್ರಯಾಣಿಕರು ಬೇರೆ ಕಡೆ ಹೋಗಲು ಸಾಧ್ಯವಾಗಿರಲ್ಲ. ನಂತರ ನೊಂದ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಮನ್ಮಾಡ್‍ನಲ್ಲಿರುವ ಅಧಿಕಾರಿಗಳು ಸಮಸ್ಯೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

 

Share Post